filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 52.0; hist255: 0.0; hist252~255: 0.0; hist0~15: 0.0; 
ಜಿಲ್ಲೆ

ಚಿಂಚಣಿ ಶ್ರೀಗಳ ಬದುಕು ಪ್ರೇರಣೆ

ಚಿಕ್ಕೋಡಿ: ಕನ್ನಡ ಭಾಷೆ, ನೆಲ, ಜಲ ಹಾಗೂ ಕನ್ನಡಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಬದುಕು ಎಲ್ಲರಿಗೂ ಪ್ರೇರಣೆ ಎಂದು ಸಾಹಿತಿ ಡಾ.ದಯಾನಂದ ನೂಲಿ ಹೇಳಿದರು.

ತಾಲೂಕಿನ ಚಿಂಚಣಿ ಸಿದ್ಧಪ್ರಭು ಕನ್ನಡಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಅವರ ಪ್ರಥಮ ಪುಣ್ಯಸ್ಮರಣೆ ಸಮಾರಂಭದಲ್ಲಿ ಮಾತನಾಡಿ, ಕನ್ನಡ ಉಳಿಸುವಲ್ಲಿ ಪೂಜ್ಯರ ಶ್ರಮ ಮೆಚ್ಚುವಂತದ್ದು. ಭಕ್ತರು ಶೀಘ್ರ ಮಠಕ್ಕೆ ಸ್ವಾಮೀಜಿ ನೇಮಕ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿ ಸಂಪಾದನ ಚರಮೂರ್ತಿಮಠದ ಜಗದ್ಗುರು ಸಂಪಾದನಾ ಸ್ವಾಮೀಜಿ ಮಾತನಾಡಿ, ಪೂಜ್ಯರು ಕನ್ನಡ ಕಟ್ಟುವ ಕೆಲಸದಲ್ಲಿ ಸದಾ ಮುಂದಿದ್ದರು. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ವಿಧಾಯಕ ಕೆಲಸಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದರು.

ಶಿರೋಳ-ಭೈರನಹಟ್ಟಿಯ ತೋಂಟದಾರ್ಯಮಠದ ಜಗದ್ಗುರು ಶಾಂತಲಿಂಗ ಸ್ವಾಮೀಜಿ ಮಾತನಾಡಿದರು.

ಆಡಿಯ ಸಿದ್ಧೇಶ್ವರ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ನಿವೃತ್ತ ಪ್ರಾಧ್ಯಾಪಕ ಎಸ್.ವೈ.ಹಂಜಿ, ಶ್ರೀಪಾದ ಕುಂಬಾರ, ಅಪ್ಪಾಸಾಹೇಬ ಚೌಗಲಾ, ಬಸವರಾಜ ಪಾಟೀಲ, ಅಭಯ ಪಾಟೀಲ, ಬಾಬಾಸಾಹೇಬ ಪಾಟೀಲ, ಗಜೇಂದ್ರ ಕರೆಪ್ಪಗೋಳ, ಮಲ್ಲೇಶ ಮಳವಾಡೆ, ಎಸ್.ಎಲ್.ಕಾಮನೆ, ಕಲಗೌಡ ಪಾಟೀಲ, ರಾಮು ಅಮ್ಮಣಗಿ, ಸುಮಿತ್ರಾ ಕುಂಬಾರ, ಅನಿಲ ಪಾಟೀಲ, ಸುಭಾಷ ಚೌಗಲಾ, ಗಡಿಗನ್ನಡಿಗರ ಬಳಗದ ಅಧ್ಯಕ್ಷ ಭರತ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಹಿರೇಮಠ ವಂದಿಸಿದರು.