ಹಾವೇರಿ: ವಿಪರೀತ ಮದ್ಯ ಸೇವಿಸುತ್ತಿದ್ದ ಸಾರಿಗೆ ಸಂಸ್ಥೆ ನಿವೃತ್ತ ನೌಕರರೊಬ್ಬರು ಮದ್ಯ ಸೇವಿಸಿದ ಅಮಲಿನಲ್ಲಿ ನೀರೆಂದು ಭಾವಿಸಿ ಯಾವುದೋ ವಿಷಕಾರಿ ಎಣ್ಣೆ ಸೇವಿಸಿ ಮೃತಪಟ್ಟ ಘಟನೆ ಇಲ್ಲಿಯ ಹೊಸನಗರದಲ್ಲಿ ಭಾನುವಾರ ನಡೆದಿದೆ.
ಅಜ್ಜಪ್ಪ ಶಿವಪ್ಪ ಮಡಿವಾಳರ (61) ಮೃತ ನೌಕರ.
ಇವರು ನೀರೆಂದು ಬಾವಿಸಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.