ಜಿಲ್ಲೆ

ಜ. ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಏ.ಮಾ. ನಾಗೇಶ್ ಕಪೂರ್

ಸುನಿಲ್ ಪೊನ್ನೇಟಿ

ಮಡಿಕೇರಿ:

ಇಲ್ಲಿನ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಏರ್ ಮಾರ್ಷಲ್ ನಾಗೇಶ್ ಕಪೂರ್ ಶುಕ್ರವಾರ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ಜನ್ಮನಿವಾಸ ಸನ್ನಿಸೈಡ್‌ಗೆ ಭೇಟಿ ನೀಡಿದ್ದ ವಾಯುಪಡೆಯ ತರಬೇತಿ ವಿಭಾಗದ ಬೆಂಗಳೂರಿನ ಮುಖ್ಯಸ್ಥ ಏರ್ ಮಾರ್ಷಲ್ ನಾಗೇಶ್ ಕಪೂರ್ ಸ್ಮಾರಕ ಭವನದ ಬಗ್ಗೆ ಮತ್ತು ವೀರಸೇನಾಧಿಕಾರಿ ಜನರಲ್ ತಿಮ್ಮಯ್ಯ ಅವರ ಸೇನಾ ಜೀವನ ಸಂಬAಧಿತ ಸಮಗ್ರ ಮಾಹಿತಿ ಪಡೆದರು. ಈ ಸಂದರ್ಭ ಪ್ರತಿಕ್ರಿಯಿಸಿದ ಏರ್ ಮಾರ್ಷಲ್ ನಾಗೇಶ್ ಕಪೂರ್, ಭಾರತದ ವೀರಸೇನಾನಿಯ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಸ್ಮಾರಕ ಭವನಕ್ಕೆ ಭೇಟಿ ನೀಡಿದ್ದು ಅಪೂರ್ವ ಕ್ಷಣಗಳಾಗಿದೆ. ಈ ವೀರಸೇನಾನಿಯ ಜೀವನ ಯುವಪೀಳಿಗೆಗೆ ಆದರ್ಶಪ್ರಾಯವಾಗಬೇಕೆಂದು ಅಭಿಪ್ರಾಯಪಟ್ಟರು.

ಈ ಸಂದಭಧ ಸ್ಮಾರಕ ಭವನದ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಅವರು ಭವನದ ಮಾಹಿತಿ ನೀಡಿದರು. ಕನ್ಡಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಕುಮಾರ್, ಸೈನಿಕ ಕಲ್ಯಾಣಾಧಿಕಾರಿ ಬಿ.ಆರ್. ಶೆಟ್ಟಿ , ಜನರಲ್ ತಿಮ್ಮಯ್ಯ ಸ್ಮಾರಕಭವನದ ಸಿಬ್ಬಂದಿ ಪಿ.ಆರ್.ಮೋಹನ್, ರಮ್ಯ ಮಾಚಯ್ಯ, ಸುಭಾಷ್ ಇದ್ದರು.