ಜಿಲ್ಲೆ

ಬಟ್ಟೆ ಅಂಗಡಿಗಳಲ್ಲಿ ಕಳ್ಳರ ಕೈಚಳಕ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಕೊಪ್ಪಿಕರ ರಸ್ತೆಯಲ್ಲಿರುವ ಕೆಲ ಬಟ್ಟೆ ಅಂಗಡಿಗಳಿಗೆ ತೆರಳಿದ ಯುವಕ-ಯುವತಿ ತಮ್ಮ ಕೈಚಳಕ ತೋರಿಸಿದ್ದಾರೆ ಪ್ಲೇಯಿಂಗ್ ಮಷಿನ್ ಎಂಬ ಅಂಗಡಿಯಲ್ಲಿ 30 ಸಾವಿರ ರೂ. ಎಗರಿಸಿದ್ದಾರೆ. ಪಕ್ಕದ ಬಟ್ಟೆ ಅಂಗಡಿಗಳಲ್ಲಿಯೂ ಮಳ್ಳರಂತೆ ಬಂದು ಕಳವು ಮಾಡಿಕೊಂಡು ಹೋಗಿದ್ದಾರೆ. ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.