ಜಿಲ್ಲೆ

ವಾಯುವಿಹಾರ ಮಾಡುತ್ತಿದ್ದ ವೃದ್ಧೆಯ ಚಿನ್ನದ ಸರ ಕಸಿದ ಕಳ್ಳರು

ಮೈಸೂರು: ನಗರದ ಶ್ರೀರಾಂಪುರ ಎಸ್‌ಬಿಎಂ ಬಡಾವಣೆಯಲ್ಲಿ ವಾಯುವಿಹಾರ ಮಾಡುತ್ತಿದ್ದ ವೃದ್ಧೆಯ ಚಿನ್ನದ ಸರವನ್ನು ಕಳ್ಳರು ಕಸಿದು ಪರಾರಿಯಾಗಿದ್ದಾರೆ.


ಬಡಾವಣೆ ನಿವಾಸಿ ಮಹದೇವಮ್ಮ(85) ಚಿನ್ನದ ಸರ ಕಳೆದುಕೊಂಡವರು. ತಮ್ಮ ಮನೆಯ ಬಳಿ ಇರುವ ಮಧುವನ ಉದ್ಯಾನ ಬಳಿ ವಾಯುವಿಹಾರ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು, ಅವರ ಕತ್ತಿನಲ್ಲಿದ್ದ 55 ಗ್ರಾಂ ತೂಕದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕುವೆಂಪುನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.