ಮಾಗಡಿ: ಹಾಡು ಹಗಲಲ್ಲೆ ವೃದ್ದೆಯ ಕೊರಳಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ ಕಳ್ಳರು.
ತಾಲೋಕಿನ ಬಾಳೇನಹಳ್ಳಿ ಗ್ರಾಮದ ವೃದ್ದೆ ಗೌರಮ್ಮ ಬುಧವಾರ ಪಟ್ಣದ ಬಿಜಿಎಸ್ ಕಾಲೇಜಿನಲ್ಲಿ ಮೊಮ್ಮಗಳ ಫೀಜ್ ಕಟ್ಟಲು ತೆರಳುತ್ತಿದ್ದ ವೇಳೆ ಕಾಲೇಜಿನ ಸಮೀ ಪ ನೀಲಿ ಬಣ್ಣದ ಅಪಾಚಿ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ವೈದ್ದೆ ಗೌರಮ್ಮ ಅವರ ಕೊರಳಿನಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಈ ವೇಳೆ ವೃದ್ದೆ ಕಿರುಚಾಡುತ್ತಿದಂತೆ ಸ್ಥಳಿಯರು ಕಳ್ಳರನ್ನು ಹಿಂಬೆಟ್ಟುವ ವೇಳೆ ಕಳ್ಳರು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ವಿಷಯ ತಿಳಿದ ಅಡಿಷನ್ ಎಸ್ ಪಿ ವೇಣುಗೋಪಾಲ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳ್ಳರು ಬೈಕ್ ನಲ್ಲಿ ವಾಪಸ್ಸು ತೆರಳಿರುವ ದೃಶ್ಯ ಸರಸ್ವತಿ ಶಾಲೆ ಕಟ್ಟಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾಡು ಹಗಲೆ ವೃದ್ದೆಯ ಚಿನ್ನದ ಸರಕದ್ದ ಕಳ್ಳರು ಬೈಕ್ ನಲ್ಲಿ ತೆರಳುವ ಪೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರಿ ವೈರಲ್ ಅಗಿದ್ದು ಇದರಿಂದ ಪಟ್ಟಣದ ನಾಗರೀಕರು ಭಯಬೀತರಾಗಿದ್ದಾರೆ.