ಮೈಸೂರು: ಜಯನಗರದಲ್ಲಿ ಮಂಗಳವಾರ ಬೈಕ್‌ನಲ್ಲಿ ಆಗಮಿಸಿದ ಕಳ್ಳರು ಯುವತಿಯ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.
ಬಡಾವಣೆ ನಿವಾಸಿ ದಾಕ್ಷಾಯಿಣಿ ಚಿನ್ನ ಕಳೆದುಕೊಂಡವರು. ಜಯನಗರದ 12ನೇ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಆಗಮಿಸಿದ ಕಳ್ಳರು 16 ಗ್ರಾಂ ತೂಕದ ಚಿನ್ನದ ಸರ ಕಳೆದು ಪರಾರಿಯಾದರು. ಅಶೋಕಪುರಂ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ