ವಿನೋಬನಗರ ಪೊಲೀಸ್ ಠಾಣೆ 
ಜಿಲ್ಲೆ

ಮನೆಯಲ್ಲಿದ್ದ ಟ್ರಂಕ್ ಹೊತ್ತೊಯ್ದ ಕಳ್ಳರು

ನವೀನ ಬಿ.ಎಂ

ಶಿವಮೊಗ್ಗ: ನವುಲೆಯ ಭೋವಿ ಕಾಲನಿಯಲ್ಲಿ ಮನೆಯೊಂದರ ಟ್ರಂಕ್‌ನಲ್ಲಿದ್ದ 142 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿ ಮತ್ತು 15 ಲಕ್ಷ ರೂ. ನಗದು ಹಾಗೂ ಅಮೂಲ್ಯ ದಾಖಲಾತಿಗಳು ಕಳವು ಮಾಡಲಾಗಿದೆ.

ಬಿ.ರಾಜಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಟ್ರಂಕ್‌ನಲ್ಲಿ ಜಮೀನಿನ ದಾಖಲಾತಿ, ಜಮೀನು ಮಾರಾಟದ ದಾಖಲಾತಿ, ಮುಂಗಡ ಹಣ, ಚಿನ್ನಾಭರಣಗಳು ಮತ್ತು ಬೆಳ್ಳಿ ವಸ್ತುಗಳನ್ನ ಇಟ್ಟಿದ್ದರು. ಈ ಟ್ರಂಕ್ ಕಳುವಾಗಿದ್ದು ಇದು ಮನೆಯಿಂದ 150 ಮೀ. ದೂರದ ಚಾನೆಲ್ನಲ್ಲಿ ಖಾಲಿ ಟ್ರಂಕ್ ಪತ್ತೆಯಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.