???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ದೇವಸ್ಥಾನದ ಒಡವೆ ದೋಚಿ ಕಳ್ಳರು ಪರಾರಿ

ಅಭಿನಯ್ ಎಚ್.ಎಂ

ಮಳವಳ್ಳಿ: ತಾಲೂಕಿನ ಕಲ್ಯಾಣಿಕೊಪ್ಪಲು ಹಾಗೂ ದೊಡ್ಡಬೂಹಳ್ಳಿ ನಡುವೆ ಇರುವ ದೇವಸ್ಥಾನಗಳಲ್ಲಿ ಸೋಮವಾರ ರಾತ್ರಿ ದೇವರ ಒಡವೆಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ಕಲ್ಯಾಣಿ ಕೊಪ್ಪಲು, ದೊಡ್ಡಬೂಹಳ್ಳಿ ಹಾಗೂ ಕ್ಯಾತನಹಳ್ಳಿಯ ಗ್ರಾಮದೇವತೆ ಕದಬಹಳ್ಳಿ ಹೆಬ್ಬಳದ ಅರಸಮ್ಮ ಮತ್ತು ಬಲಿ ಅರಸಮ್ಮ ದೇವಸ್ಥಾನಗಳಲ್ಲಿ ಕಳ್ಳತನವಾಗಿದೆ.

ಹರಕೆ ಹೊತ್ತ ಭಕ್ತರು ನೀಡಿದ್ದ ಚಿನ್ನದ ಮಾಂಗಲ್ಯಗಳನ್ನು ಗರ್ಭಗುಡಿಯಲ್ಲಿದ್ದ ದೇವಿಯರ ವಿಗ್ರಹಗಳಿಗೆ ಹಾಕಲಾಗಿತ್ತು. ಜನವಸತಿ ಇಲ್ಲದ ಕಡೆಗಳಲ್ಲಿ ಎರಡೂ ದೇವಸ್ಥಾನಗಳು ಅಕ್ಕಪಕ್ಕದಲ್ಲಿದ್ದು, ಕಬ್ಬಿಣದ ರಾಡ್ ಬಳಸಿ ದೇವಸ್ಥಾನಗಳ ಬೀಗವನ್ನು ಒಡೆದು ದೇವರ ಮೈಮೇಲಿದ್ದ ಸುಮಾರು ಎಂಟು ಚಿನ್ನದ ಮಾಂಗಲ್ಯಗಳನ್ನು ದೋಚಲಾಗಿದೆ. ಎಂದಿನಂತೆ ಅರ್ಚಕರು ದೇವರ ಪೂಜೆಗಾಗಿ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅರ್ಚಕರಾದ ಅಶ್ವಥ್ ಮತ್ತು ಮಾಳಗಯ್ಯ ಬೆಳಕವಾಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬೆಳಕವಾಡಿ ಪೊಲೀಸ್ ಠಾಣೆ ಪಿಎಸೈ ಬಿ.ವಿ.ಪ್ರಕಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.