ಜಿಲ್ಲೆ

ಚಿನ್ನ, ವಿದೇಶಿ ಕರೆನ್ಸಿ ದೋಚಿದ್ದವ ಕಳ್ಳರ ಬಂಧನ

Gadag - Desk - Tippanna Avadoot

ಭಟ್ಕಳ: ಜೂ. 23ರಂದು ವೆಂಕಟಾಪುರದ ರಿಬ್ಕೊ ಕಾಲನಿಯಲ್ಲಿ ಮನೆಯ ಬಾಗಿಲು ಮುರಿದು ವಿದೇಶಿ ಕರೆನ್ಸಿ ಹಾಗೂ ಚಿನ್ನಾಭರಣ ದೋಚಿದ ಕಳ್ಳರನ್ನು ಶನಿವಾರ ಪೊಲೀಸರು ಸೆರೆಹಿಡಿದಿದ್ದು, ಬಂಧಿತರಿಂದ ಹಣ ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.


ಗುಳ್ಮಿ ಬಿಳಾಲಖಂಡ ನಿವಾಸಿಗಳಾದ ಮೊಹಮ್ಮದ ಸಾಧಿಕ್ ಅಲ್ಲಾಭಕ್ಷ ಹಾಗೂ ಮುಜಾಮಿಲ್ಲ ರಹಮತುಲ್ಲಾ ಶೇಖ ಬಂಧಿತರು.


ಭಟ್ಕಳ ರಿಬ್ಕೊ ಇಂಡಸ್ಟ್ರೀಸ್ ಮಾಲೀಕ ಮೊಹಮ್ಮದ ರುಮೇಜ್ ವ್ಯವಹಾರ ನಿಮಿತ್ತ ಹೊರಗಡೆ ಹೋದಾಗ ಕಳ್ಳರು ಅವರ ಮನೆಯ ಬಾಗಿಲು ಮುರಿದು ಒಳನುಗ್ಗಿ ವಿದೇಶಿ ಕರೆನ್ಸಿ, ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದರು.


ತನಿಖೆ ಚುರುಕುಗೊಳಿಸಿದ ಗ್ರಾಮಾಂತರ ಠಾಣಾ ಸಿಪಿಐ ಚಂದನ ಗೋಪಾಲ ವಿ, ಪಿಎಸ್​ಐಗಳಾದ ಶ್ರೀಧರ ನಾಯ್ಕ ಹಾಗೂ ಮಯೂರ ಪಟ್ಟಣ ಶೆಟ್ಟಿ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.


ಬಂಧಿತರಿಂದ 70 ಗ್ರಾಂ ಚಿನ್ನಾಭರಣ, ವಿದೇಶಿ ಕರೆನ್ಸಿ ಹಾಗೂ 42 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.