ಜಿಲ್ಲೆ

ಅಕ್ಕಿ‌ ಕಳ್ಳರ ಬಂಧನ‌ 154 ಕ್ವಿಂಟಾಲ್ ಅಕ್ಕಿ ವಶ

reportergvt

ಕೊಪ್ಪಳ: ಕಳೆದ ಮಾ. 5 ರಂದು ಅಕ್ಕಿ ಲೋಡ್ ಎಗರಿಸಿದ್ದ ಚಾಲಾಕಿ ಕಳ್ಳರನ್ನು ಮುನಿರಾಬಾದ್ ಪೊಲೀಸರು ಬಂಧಸಿದ್ದು, ಆರೋಪಿಗಳಿಂದ 8.50 ಲಕ್ಷ ರೂ. ಮೊತ್ತದ ಅಕ್ಕಿ‌ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಕೂಕನಪಳ್ಳಿಯ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಪ್ರಶಾಂತ, ಕೊಪ್ಪಳದ ಗೌತಮ ಬಳಗಾನೂರು, ಮೂಕಪ್ಪ ಅಲಿಯಾಸ್ ಗವಿ ಹೂಗಾರ ಬಂಧಿತರು. ಮಾ.5 ರಂದು ಕೊಪ್ಪಳ ತಾಲೂಕಿನ ಬೂದಗುಂಪಾ ಬಳಿ ಕ್ಯಾಂಟರ್ ನಲ್ಲಿದ್ದ 154 ಕ್ವಿಂಟಾಲ್ ಅಕ್ಕಿಯನ್ನು ಗಾಡಿ ಸಮೇತ ಕದ್ದೊಯ್ದಿದ್ದರು.

ಈ ಸಂಬಂಧ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಕೆಲ ದಿನಗಳಲ್ಲೇ ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಎರಡು ಲಕ್ಷ‌ರೂ. ಮೌಲ್ಯದ 80 ಕ್ವಿಂಟಾಲ್ ಅಕ್ಕಿ, 1.50ಲಕ್ಷ‌ ರೂ.‌ನಗದು, ಐದು ಲಕ್ಷ‌ ರೂ. ಮೌಲ್ಯದ ಒಂದು ಟೋಯೊಟೊ ಕಾರ್ ವಶಕ್ಕೆ ಪಡೆಯಲಾಗಿದೆ.