ಭಟ್ಕಳ: ಅಪರಿಚಿತನ ಸೋಗುಹಾಕಿಕೊಂಡು ತನ್ನ ಮನೆಯಲ್ಲಿ ಕನ್ನ ಹಾಕಿದ ವ್ಯಕ್ತಿಯೊರ್ವನನ್ನು ಭಟ್ಕಳ ಶಹರ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದದಾರೆ.
ಭಟ್ಕಳ ಪಟ್ಟಣದ ನಿವಾಸಿ ತಜಿಮುಲ್ಲಾ ಹುಸೈನ್ ಬಂಧಿತ ಆರೋಪಿ. ಬಂಧಿತನಿಂದ 6 ಚಿನ್ನದ ಬಳೆ, ಒಂದು ಚಿನ್ನದ ಸರವನ್ನು ಪೊಲೀಸರು ಜಪ್ತು ಮಾಡಿಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ ಮನೆಯವರು ನಮಾಜ್‌ಗೆಂದು ತೆರಳಿದಾಗ ಮುಸುಕುಧಾರಿಯಾಗಿ ಮನಗೆ ನುಗ್ಗಿದ್ದ ಈತ ತನ್ನದೆ ಅಜ್ಜಿಯ ಬಂಗಾರವನ್ನು ಕದ್ದೋಯ್ದಿದ್ದ. ಬಳಿಕ ಪೊಲೀಸ್ ಠಾಣೆಗೆ ತೆರಳಿ ವೃದ್ಧೆಗೆ ಸಹಾಯ ಮಾಡುವಂತೆ ನಟಿಸಿ ದೂರು ನೀಡಿದ್ದ. ಮನೆಯಲ್ಲಿ ಹಾಕಿದ್ದ ಸಿಸಿಟಿವಿ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬಂಗಾರವನ್ನು ಜಪ್ತು ಮಾಡಿದ್ದಾರೆ.