ಚನ್ನಮ್ಮನ ಕಿತ್ತೂರು: ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಬೆಳಗಾವಿಯ ರುಕ್ಮಿಣಿ ನಗರದ ಜಗನ್ನಾಥರಾಮ ಢಾಪಳೆ (42) ಅವನನ್ನು ಬುಧವಾರ ಬಂಧಿಸಿರುವ ಕಿತ್ತೂರು ಪೊಲೀಸರು 20.30 ಲಕ್ಷ ರೂ. ಮೊತ್ತದ 203 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ವಿದ್ಯಾಗಿರಿಯ ಪ್ರವೀಣ ಶಂಕರ ಇಟಗಿ ಅವರ ಮನೆಯಲ್ಲಿ 2024 ಜುಲೈ 8ರಂದು 11.60 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಹಾಗೂ 5.30 ಲಕ್ಷ ರೂ. ನಗದು ದೋಚಿರುವ ಕುರಿತು ಕಿತ್ತೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದು ಬೈಲಹೊಂಗಲ, ಹುಕ್ಕೇರಿ ತಾಲೂಕುಗಳಲ್ಲ್ಲಿ ಒಟ್ಟು ಐದು ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿವೆ.
ಬೈಲಹೊಂಗಲ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಗುಡುಗನಟ್ಟಿ, ಪಿಎಸ್‌ಐ ಪ್ರವೀಣ ಗಂಗೋಳ, ಎಎಸ್‌ಐ ಎಂ.ಜಿ.ವಸದ ಕಿತ್ತೂರು ಠಾಣೆ ಸಿಬ್ಬಂದಿ ಎಸ್.ಎ.ದೆೇದಾರ, ಎಂ.ಆರ್.ಗಳಗಿ, ಎಂ.ಜಿ.ಚಿಕ್ಕೆರಿ, ಆರ್.ಎಸ್.ಶೀಲಿ, ಎಸ್.ಬಿ.ಹುಣಸೀಕಟ್ಟಿ, ಎ.ಆರ್.ಪಾಟೀಲ, ರಾಜು ಗೌರಕ್ಕನವರ, ಎಂ.ಸಿ.ಇಟಗಿ, ವಿನೋದ ಠಕ್ಕಣ್ಣವರ, ಸಚಿನ ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.