ಹುಬ್ಬಳ್ಳಿ: ಶ್ರೀ ಸಿದ್ಧಾರೂಢಸ್ವಾಮಿ ದ್ವಾರ ಬಾಗಿಲ ಹತ್ತಿರ ಮಲಗಿದ್ದ ಹಾವೇರಿ ಜಿಲ್ಲೆಯ ರೈತನನ್ನು ಹೆದರಿಸಿ 78 ಸಾವಿರ ರೂ. ಕಿತ್ತುಕೊಂಡು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನ. 14ರಂದು ರಾತ್ರಿ 2.40ರಿಂದ 3.30ರ ಸುಮಾರಿಗೆ ಮಲಗಿದ್ದಾಗ ಅಪರಿಚಿತರಿಬ್ಬರು ತಂಬಾಕು ಕೊಡು ಎಂದು ಎಬ್ಬಿಸಿದ್ದಾರೆ. ತಂಬಾಕು ಇಲ್ಲ ಎಂದಾಗ ಕುತ್ತಿಗೆ ಹಿಡಿದು ಕೊಲೆ ಮಾಡುವುದಾಗಿ ಹೆದರಿಸಿ ವ್ಯಾಪಾರ ಮಾಡಿ ಇಟ್ಟುಕೊಂಡಿದ್ದ 78 ಸಾವಿರ ರೂ. ನಗದು, ಟ್ರಾೃಕ್ಟರ್ ಟೂಲ್ ಕಿಟ್ ಕಿತ್ತುಕೊಂಡು ಹೋಗಿದ್ದಾರೆ ಎಂದು ಹಾನಗಲ್ ತಾಲೂಕಿನ ದೇಸಾಯಿ ಕಲ್ಲಾಪುರ ಗ್ರಾಮದ ರೈತ ಸುಭಾಷ ಗೋಣಿ ಎಂಬುವವರು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.