ಆಯನೂರು: ಗೃಹಲಕ್ಷ್ಮೀಯೋಜನೆಯ ನೇರ ಪ್ರಸಾರವನ್ನು ಕೋಹಳ್ಳಿ ಪಂಚಾಯಿತಿಯಿಂದ ಸಂತೆ ಮಾರುಕಟ್ಟೆ ಹಾಗೂ ಆಯನೂರು ಪಂಚಾಯಿತಿಯವರು ನರಸಿಂಹ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದು ಎಲ್ಇಡಿ ಪರದೆಯ ಮುಂಭಾಗದಲ್ಲಿ ರಂಗೋಲಿ ಹಾಕಿ ಬಾಳೆ, ಕಂಬಗಳನ್ನು ಕಟ್ಟಿ ಅಲಂಕರಿಸಿಲಾಗಿತ್ತು. ನೇರ ಪ್ರಸಾರ ವೀಕ್ಷಿಸಿಲು ಅತಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಂದ ಪರಿಣಾಮ ಕುಳಿತುಕೊಳ್ಳಲು ಹಾಕಲಾಗಿದ್ದ ಕುರ್ಚಿಗಳು ಸಕಾಗದೆ ಹೋಯಿತು. ಆಯನೂರು ಗ್ರಾಪಂ ಉಪಾಧ್ಯಕ್ಷ ನಿರಂಜನ ಗೌಡ, ಮಾಜಿ ಅಧ್ಯಕ್ಷೆ ಲೀಲಾವತಿ, ಸದಸ್ಯರಾದ ಸುಮಾ, ಲತಾ, ಲಕ್ಷ್ಮಣಪ್ಪ, ಸುಧಾಕರ, ಪಿಡಿಒ ದೊರೆ, ಕೋಹಳ್ಳಿ ಪಂಚಾಯಿತಿ ಪಿಡಿಒ ರುದ್ರಸ್ವಾಮಿ, ಸದಸ್ಯರಾದ ಸುಮಿತ್ರಾ, ಚಂದ್ರಕಲಾ, ವಿನೋದಾ, ಅಣ್ಣಪ್ಪ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ಮಹಿಳೆಯರು ಇದ್ದರು.