ಮೈಸೂರು: ಬಿಜೆಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಆಲೋಚನೆ ಜೆಡಿಎಸ್‌ಗೆ ಇರಲಿಲ್ಲ. ಆದರೆ, ಜೆಡಿಎಸ್ ಸದಸ್ಯೆ ನಿರ್ಮಲ ಹರೀಶ್ ಅವರನ್ನು ಕಾಂಗ್ರೆಸ್ ಅಂತಿಮ ಕ್ಷಣದಲ್ಲಿ ಸೆಳೆದ ಹಿನ್ನೆಲೆಯಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಯಿತು. ಇಲ್ಲವಾದಲ್ಲಿ ಜೆಡಿಎಸ್ ಸಹ ಸ್ವತಂತ್ರವಾಗಿ ಸ್ಪರ್ಧೆ ಮಾಡುತಿತ್ತು ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಉಪ ಮೇಯರ್ ಸ್ಥಾನವನ್ನು ಬಿಜೆಪಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಆದರೆ, ನಾಮಪತ್ರ ಸಲ್ಲಿಸುವ ಸಂದರ್ಭ ಆದ ತಪ್ಪಿನಿಂದ ಜೆಡಿಎಸ್‌ಗೆ ಉಪ ಮೇಯರ್ ಸ್ಥಾನ ದೊರೆಯಲಿಲ್ಲ ಎಂದು 'ವಿಜಯವಾಣಿ'ಗೆ ತಿಳಿಸಿದರು.