ಬಸವನಬಾಗೇವಾಡಿ ಮತಕ್ಷೇತ್ರದ ಬಳೂತಿ, ಹನುಮಾಪುರ, ಮಟ್ಟಿಹಾಳ, ಕುರುಬರದಿನ್ನಿ, ನಾಗರದಿನ್ನಿ ಸೇರಿ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಶಿವಾನಂದ ಪಾಟೀಲ ಮತಯಾಚಿಸಿದರು. ಕೊಲ್ಹಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪಕಾಲಿ, ಕಲ್ಲು ದೇಸಾಯಿ, ತಾನಾಜಿ ನಾಗರಾಳ, ಚನ್ನಮಲ್ಲಪ್ಪ ಗಿಡ್ಡಪ್ಪಗೊಳ ಇತರರಿದ್ದರು. 
ಜಿಲ್ಲೆ

ಸುಳ್ಳು ಹೇಳುವುದಕ್ಕೂ ಮಿತಿ ಇರಲಿ - ಶಿವಾನಂದ ಪಾಟೀಲ

Vijayapura - Desk - Gurappa Lokuri

ಬಸವನಬಾಗೇವಾಡಿ: ಅಕ್ಕಿ ಮೋದಿ ಅವರದ್ದು ಖಾಲಿ ಚೀಲ ಸಿದ್ದರಾಮಯ್ಯನವರದ್ದು ಎಂದು ಹೇಳುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು 10 ಕೆಜಿ ಅಕ್ಕಿ ಕೊಡುವುದನ್ನು ಬಿಟ್ಟು 5 ಕೆಜಿ ಏಕೆ ಕೊಡುತ್ತಿದ್ದಾರೆ? ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕೆಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಬಸವನಬಾಗೇವಾಡಿ ಮತ ಕ್ಷೇತ್ರದ ಬಳೂತಿ, ಹನುಮಾಪುರ, ಮಟ್ಟಿಹಾಳ, ಕುರುಬರದಿನ್ನಿ, ನಾಗರದಿನ್ನಿ ಸೇರಿ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರವಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಬಡವರಿಗೆ ಉಚಿತ 10 ಕೆಜಿ ಅಕ್ಕಿ ನೀಡುತ್ತಿದ್ದರು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 5 ಕೆಜಿ ಅಕ್ಕಿ ಕಡಿತಗೊಳಿಸಿದ್ದಾರೆ. ಮೊದಿಯವರದ್ದೇ ಅಕ್ಕಿಯಾಗಿದ್ದರೆ, 10 ಕೆಜಿ ಬದಲು 12 ಕೆಜಿ ಕೊಡಬಹುದಿತ್ತು. ಸುಳ್ಳು ಹೇಳುವುದಕ್ಕೂ ಮಿತಿ ಇದೆ. ಅತಿ ಸುಳ್ಳು ಒಮ್ಮೆ ತಿರುಗು ಬಾಣವಾಗಲಿದೆ. ಈ ಬಾರಿ ಚುನಾವಣೆಯಲ್ಲಿ ಜನರು ಸತ್ಯಕ್ಕೆ ಮತ ನೀಡಲಿದ್ದಾರೆ ಎಂದರು.

ಕೊಲ್ಹಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪಕಾಲಿ, ಕಲ್ಲು ದೇಸಾಯಿ, ತಾನಾಜಿ ನಾಗರಾಳ, ಚನ್ನಮಲ್ಲಪ್ಪ ಗಿಡ್ಡಪ್ಪಗೊಳ, ಎಸ್.ಬಿ. ಪತಂಗಿ, ಪ್ರಕಾಶ ಬಶೆಟ್ಟಿ, ಪಿ.ಸಿ. ಬಾವಪ್ಪಮುತ್ಯಾ, ವಿಠ್ಠಲ ಶ್ಯಾವಿಗೊಂಡ, ಶರಣಗೌಡ ಪಾಟೀಲ, ಮುತ್ತುಸಾಹುಕಾರ ಹಳ್ಳೂರ ಇತರರಿದ್ದರು.