ಜಿಲ್ಲೆ

ಶಿಕ್ಷಣದಲ್ಲಿ ಮೌಲ್ಯ ಶೂನ್ಯ

ಮಂಜುನಾಥ ತಿಮ್ಮಯ್ಯ

ಮೈಸೂರು: ಅನುಭವ ಅಭಿವ್ಯಕ್ತಿಯೇ ವಿಶ್ವವಿದ್ಯಾಲಯಾವಾದರೆ, ಶರಣರ ಅನುಭವ 12ನೇ ಶತಮಾನದ ಅನುಭವ ಮಂಟಪ ಸರ್ಟಿಫಿಕೆಟ್ ಇಲ್ಲದ ವಿಶ್ವವಿದ್ಯಾಲಯದ ಪ್ರಮಾಣ ಪತ್ರವಾಗಿದೆ ಎಂದು ಕನ್ನಡ ಪ್ರಾಧ್ಯಾಪಕಿ, ಲೇಖಕಿ ಎಸ್.ನೀಲಾಂಬಿಕ ಹೇಳಿದರು.


ಶರಣ ಸಾಹಿತ್ಯ ಪರಿಷತ್ ವತಿಯಿಂದ ಮನೆ ಮನೆಗೆ ಶರಣ ಸಂದೇಶದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದರು.


ನಾಗರಿಕತೆ ಬೆಳೆದಂತೆ ಜನರ ದುರಾಸೆ, ಸ್ವಾರ್ಥ ಉಲ್ಬಣಗೊಂಡು ಬದುಕು ದುಸ್ತರವಾಗಿದೆ. ಈ ಸಂದರ್ಭದಲ್ಲಿ ವಚನಗಳು ಮಾರ್ಗ ತೋರಬಲ್ಲದು. ಇಂದಿನ ಶಿಕ್ಷಣದಲ್ಲಿ ಮೌಲ್ಯ ಶೂನ್ಯವಾಗಿವೆ. ವಚನ ಸಾಹಿತ್ಯದ ಓದು ಅಧ್ಯಯನ ಮತ್ತು ಆಚರಣೆ ಅಗತ್ಯ ಎಂದು ಹೇಳಿದರು.


ಸಮಾಜದಲ್ಲಿ ಶೇ.85ರಷ್ಟು ಸುಸಂಸ್ಕೃತರು ಇದ್ದರೂ ಶೇ.15ರಷ್ಟು ಇರುವ ಅನಾಗರಿಕ ವರ್ತನೆ ಅರ್ಬುದ ರೋಗದಂತೆ ಎಲ್ಲವನ್ನು ನಾಶ ಮಾಡುತ್ತದೆ ಎಂದು ಹೇಳಿದರು.


ಶರಣ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಮ.ಗು.ಸದಾನಂದಯ್ಯ, ವಿಮಲಾ, ಶಿವಾನಂದ, ಶ್ವೇತ, ಶೀಲಾ, ಲೋಕೇಶಪ್ಪ ಪಾಟೀಲ್, ಸುಜಾತಾ, ನಂದೀಶ್ ಇನ್ನಿತರರಿದ್ದರು.