ಜಿಲ್ಲೆ

ಚುನಾವಣೆಗೆ ಸಮಯವಿದೆ

ರಾಘವೇಂದ್ರಗೌಡ ಭೀ ಪಾಟೀಲ್

ನಂದೇಶ್ವರ: ಡಿಸಿಸಿ ಬ್ಯಾಂಕ್ ಚುನಾವಣೆಗೆ ಇನ್ನೂ ಎರಡು ತಿಂಗಳು ಸಮಯವಿದ್ದು, ಮುಂಬರುವ ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಮೀಪದ ಸತ್ತಿ ಗ್ರಾಮದ ಜೈ ಹನುಮಾನ ಪಿಕೆಪಿಎಸ್ ಸಹಕಾರ ಸಂಘಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿ, ಚುನಾವಣೆ ಎದುರಿಸಲು ಇನ್ನೂ ಸಮಯ ಅವಕಾಶವಿದೆ. ಇದು ಪಕ್ಷದ ಮೂಲಕ ನಡೆಯುವ ಚುನಾವಣೆಯಲ್ಲ, ಸ್ಥಳೀಯರನ್ನು ಒಳಗೊಂಡ ಚುನಾವಣೆ ಮಾಡಬೇಕಾಗುತ್ತದೆ. ಚುನಾವಣೆ ಹತ್ತಿರ ಬಂದಾಗ ಅಭ್ಯರ್ಥಿ ಘೋಷಣೆ ಸೇರಿ ಅದರ ಬಗ್ಗೆ ಯೋಚಿಸೋಣ ಎಂದರು.

ಸಂಘದ ವತಿಯಿಂದ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಶಾಸಕ ಗಣೇಶ ಹುಕ್ಕೇರಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಮುಖಂಡ ಬಿ.ಆರ್.ಪಾಟೀಲ, ಕಾಂಗ್ರೆಸ್ ಪಕ್ಷದ ಮುಖಂಡ ರಮೇಶ ಸಿಂದಗಿ, ಅಥಣಿ ಪುರಸಭೆ ಮಾಜಿ ಅಧ್ಯಕ್ಷ ರಾವಸಾಹೇಬ ಐಹೊಳೆ, ಪಿಕೆಪಿಎಸ್ ಅಧ್ಯಕ್ಷ ಕುಮಾರ ಜಗದೇವ, ಮಲ್ಲಪ್ಪ ಹಂಚಿನಾಳ, ಬಸವರಾಜ ದಳವಾಯಿ, ವಕೀಲ ಶ್ರೀಶೈಲ ಮೇತ್ರಿ, ಮಹೇಶ ಪಾಟೀಲ, ಸುರೇಶ ಬಿರಡಿ, ಮಲಗೌಡ ಪಾಟೀಲ, ಬಸವರಾಜ ಬಿಸಗುಪ್ಪಿ ಇತರರಿದ್ದರು.