ಜಿಲ್ಲೆ

ಆರ್​ಎಸ್​ಎಸ್​ ನಿಷೇಧಿಸಿದರೆ ತಪ್ಪೇನಿಲ್ಲ

ಸೋಮಲಿಂಗ ತಳವಾರ

ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂ (ಆರ್​ಎಸ್​ಎಸ್​) ರಾಜಕೀಯ ಸಂಟನೆಯೇ ಹೊರತು ಸಾಮಾಜಿಕ ಸಂಟನೆಯಲ್ಲ. ಅದರ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು. ಅಂಥ ಸಂವನ್ನು ನಿಷೇಧ ಮಾಡುವುರಲ್ಲಿ ತಪ್ಪೇನಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್​ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್​ಎಸ್​ಎಸ್​ ನಾಯಕರು ವಿವಿಧ ಸರ್ಕಾರ ರಚಿಸುವಲ್ಲಿ ಮತ್ತು ಉರುಳಿಸುವಲ್ಲಿ ಭಾಗಿಯಾಗಿದ್ದಾರೆ. ಚುನಾವಣೆಯಲ್ಲೂ ಆ ಸಂದ ನಾಯಕರು ಸ್ಪ-ರ್ಧಿಸುತ್ತಾರೆ. ಅದು ಸಾಮಾಜಿಕ ಸಂಟನೆಯಲ್ಲ. ಸರ್ಕಾರಿ ನೌಕರರು ಆರ್​ಎಸ್​ಎಸ್​ನ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನಿಷೇಧಿ-ಸಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಭೋಜನ ಕೂಟದಲ್ಲಿ ಸಂಪುಟ ಪುನಾರಚಣೆ ಬಗ್ಗೆ ಚರ್ಚಿಸಲಿಲ್ಲ. ವಿವಿಧ ಇಲಾಖೆಗಳ ಕಾರ್ಯಮತೆ ಮತ್ತು ರಾಜ್ಯದ ಪರಿಸ್ಥಿತಿ ಬಗ್ಗೆ ಚರ್ಚಿಸಲಾಯಿತು. ಉಳಿದ ಎಲ್ಲ ವಿಷಯಗಳು ಊಹಾಪೋಹ ಎಂದರು. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ವೆದ್ಯರ ನೇಮಕ ಪ್ರಕ್ರಿಯೆ ನಡೆದಿದೆ. ಆದಷ್ಟು ಬೇಗ 230 ವೆದ್ಯರ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.