ಜಿಲ್ಲೆ

ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ಇಟ್ಟರೆ ತಪ್ಪೇನು ಇಲ್ಲ : ಜಿ.ಟಿ. ದೇವೇಗೌಡ

ಮೈಸೂರು: ಪಿಕೆಟಿಬಿ ರಸ್ತೆಗೆ ‘ಪ್ರಿನ್ಸಸ್ ರಸ್ತೆ’ ಎಂಬ ಹೆಸರು ನಾಮಕರಣ ಆಗದೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಇಡುವುದರಲ್ಲಿ ತಪ್ಪೇನು ಇಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಸ್ತೆಗೆ ಹೆಸರು ಇಡುವ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳ ನಡೆಯುತ್ತಿವೆ, ಅದರ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ಇಲ್ಲ. ಆ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂದು ಬಹಳ ಹಿಂದೆಯೇ ಹೆಸರು ಇಡಲಾಗಿದೆ ಎಂದು ಸಂಸದ ಯದುವೀರ್ ಹೇಳಿಕೆ ನೀಡಿದ್ದಾರೆ. ಮತ್ತೆ ಕೆಲವರು ಆ ರಸ್ತೆಗೆ ಯಾವ ಹೆಸರನ್ನು ಇಟ್ಟಿಲ್ಲ ಎನ್ನುತ್ತಾರೆ. ಒಂದುವೇಳೆ ಯಾವುದೇ ಹೆಸರು ಇಟ್ಟಿಲ್ಲದೆ ಇದ್ದರೆ ಸಿದ್ದರಾಮಯ್ಯ ಹೆಸರು ಇಡಬಹುದು ಎಂದರು.