ಜಿಲ್ಲೆ

ಸಿಎಂ ಡಿನ್ನರ್ ಕೂಟದಲ್ಲಿ ವಿಶೇಷತೆ ಇಲ್ಲ

ಪ್ರಸಿನ್ ಕೆ.ಆರ್

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.13ರಂದು ಆಯೋಜಿಸಿರುವ ಡಿನ್ನರ್ ಕೂಟದಲ್ಲಿ ಬೇರೆ ವಿಶೇಷತೆ ಇಲ್ಲ ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್ ತಿಳಿಸಿದರು.

ಹಾಸನಾಂಬೆ ದರ್ಶನ ಪಡೆದು ನಂತರ ಮಾತನಾಡಿದ ಅವರು, ಡಿನ್ನರ್ ಪಾಟಿಲಿಕ್ಸ್ ಹೊಸದೇನಲ್ಲ, ನಮ್ಮ ಮನೆಗೂ ಹಿರಿಯ ಸಚಿವರು ಬರ್ತಾರೆ. ರಾಜಕೀಯ ಚರ್ಚೆ ಏನೂ ಇಲ್ಲ, ಆಗಾಗ್ಗೆ ಊಟಕ್ಕೆ ಸೇರ್ತಾರೆ. ಅದಕ್ಕೆ ವಿಶೇಷವಾದ ಅರ್ಥ ಏನೂ ಇಲ್ಲ ಎಂದರು.

ಈ ಬಾರಿ ರಾಜ್ಯದಲ್ಲಿ ತುಂಬಾ ಮಳೆಯಾಗಿದೆ. ಮಳೆಯಿಂದ ಹಾನಿ ವಿಚಾರವಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ, ಮುಖ್ಯಮಂತ್ರಿಗಳು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ ಎಂದರು.

ಪ್ರತಿವರ್ಷ ನವರಾತ್ರಿ ಆದ ಮೇಲೆ ವರ್ಷಕ್ಕೆ ಒಂದು ಬಾರಿ ದೇವಾಲಯ ತೆರೆಯುತ್ತೆ, ಇದು ಪವಾಡ ಇರುವಂತಹ ದೇವಸ್ಥಾನ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಾರೆ. ಕಳೆದ ಬಾರಿ ಬಹಳ ಗೊಂದಲಗಳು ಸೃಷ್ಟಿಯಾಗಿತ್ತು. ಜನಸಾಮಾನ್ಯರು ಜಿಲ್ಲಾಡಳಿತಕ್ಕೆ ಶಾಪ ಹಾಕಿರುವುದನ್ನು ನೋಡಿದ್ದೇವೆ, ತಾಯಿ ಹಾಸನಾಂಬೆ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಆಶಿಸಿದರು.