ಜಿಲ್ಲೆ

ನರೇಂದ್ರ ಮೋದಿಗೂ ದೂರು ನೀಡುವೆ, ಕ್ಷಮಿಸುವ ಮಾತೇ ಇಲ್ಲ

ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಳಸಿದ್ದ ಅವಾಚ್ಯ ಶಬ್ದದ ಕುರಿತು ಪ್ರಧಾನಿ ನರೇಂದ್ರ ಮೋದಿಗೂ ದೂರು ನೀಡುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಡಿ.19ರಂದು ಸಿ.ಟಿ. ರವಿ ಬಳಸಿದ್ದಾರೆ ಎನ್ನಲಾದ ಅವಾಚ್ಯ ಪದ ಬಳಕೆಯ ವಿಡಿಯೋ ಸಾಕ್ಷೃವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿ, ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಗ್ಗೆ ಸಭಾಪತಿಗಳಿಗೆ ಮತ್ತೊಮ್ಮೆ ದೂರು ನೀಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡುವೆ ಎಂದರು.

ನಾನು ಕೂಡಾ ಸಂಘರ್ಷ ಮಾಡಿಯೇ ರಾಜಕೀಯಕ್ಕೆ ಬಂದಿದ್ದೇನೆ. ಅಲ್ಲದೇ ನಾನು ಚನ್ನಮ್ಮನ ನಾಡಿನ ಮಹಿಳೆ. ಈಗ ನನಗೆ ಅನ್ಯಾಯ ಆಗಿದೆ. ನಾನು ಕೂಡಾ ಕಾನೂನು ಹೋರಾಟ ಮುಂದುವರೆಸುತ್ತೇನೆ. ರಾಷ್ಟ್ರಪತಿ ಅವರಿಗೂ ಕಂಪ್ಲೇಟ್ ನೀಡಲಾಗುವುದು. ನಾನು ಎಂದಿಗೂ ಈ ಸಿ.ಟಿ. ರವಿ ಅವರನ್ನು ಎಂದಿಗೂ ಕ್ಷಮಿಸುವದಿಲ್ಲ. ಅವರು ಮಾಡಿದ ಅವಮಾನ ಇಡಿ ಮಹಿಳೆ ಕೂಲಕ್ಕೆ ಅವಮಾನ ಮಾಡಿದಂತಾಗಿದೆ. ಅದ್ದರಿಂದ ನಾನು ಈ ಪಕರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.