ಜಿಲ್ಲೆ

ಚರಿತ್ರೆ ಇಲ್ಲದೆ ಪ್ರವಾಸೋದ್ಯಮ ಇಲ್ಲ:ಪ್ರೊ.ಎಸ್​.ಚಂದ್ರಶೇಖರ್​ ಹೇಳಿಕೆ

ಹರೀಶ್​​ ಕೆ.ಸಿ.

ಬೆಂಗಳೂರು: ಭಾರತದಲ್ಲಿ ಚರಿತ್ರೆ ಇಲ್ಲದೆ ಪ್ರವಾಸೋದ್ಯಮ ಇಲ್ಲವೆಂದು ಕರ್ನಾಟಕ ಕೇಂದ್ರೀಯ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಸ್​. ಚಂದ್ರಶೇಖರ್​ ಹೇಳಿದ್ದಾರೆ.

ಜೈನ್​ ಡಿಮ್ಡ್​ ಯೂನಿವರ್ಸಿಟಿ ಸಹಯೋಗದಲ್ಲಿ ರಾಷ್ಟ್ರೀಯ ಗ್ರಾಮೀಣ ವಿಕಾಸ ಕೇಂದ್ರ, ಶನಿವಾರ ರವೀಂದ್ರ ಕಲಾಕ್ಷೇತ್ರ ಬಳಿ ಜೈನ್​ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ "ಕರ್ನಾಟಕ ಇತಿಹಾಸದ ಪುಟಗಳು' ಮತ್ತು ಐತಿಹಾಸಿಕ ತಾಣಗಳತ್ತ ನಮ್ಮ ಪಯಣ' ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಪ್ರವಾಸೋದ್ಯಮ ಇಲ್ಲದೆ ಹೋಟೆಲ್​ ಉದ್ಯಮ ಇಲ್ಲ.ಆದರೆ, ಚರಿತ್ರೆ ಉದ್ಯಮವಾಗಬಾರದು.ಚರಿತ್ರೆ ಒಂದು ಜ್ಷಾನ ಶಿಸ್ತು. ಈ ಉದ್ಯಮದ ಜತೆಗೆ ಚರಿತ್ರೆಯು ನೈತಿಕ ಶಿಸ್ತಿನ ಚೌಕಟ್ಟನ್ನು ಕೊಡಬೇಕು. ಚರಿತ್ರೆಗೆ ಆದ್ಯತೆ ನೀಡಿದರೆ ಪ್ರವಾಸೋದ್ಯಮಕ್ಕೂ ಆದ್ಯತೆ ದೊರಕುತ್ತದೆ. ಆದ್ದರಿಂದ,ಚಾರಿತ್ರಿಕ ಸ್ಮಾರಕಗಳು ಮತ್ತು ಚರಿತ್ರೆಯ ಅಧ್ಯಯನ ಅಭಿವೃದ್ಧಿ ಹೊಂದಬೇಕು ಎಂದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​​​​ಕೆಸಿಸಿಐ) ಮಾಜಿ ಅಧ್ಯ ಆರ್​. ಶಿವಕುಮಾರ್​ ಮಾತನಾಡಿ, ಪ್ರತಿ ವರ್ಷ ಕರ್ನಾಟಕಕ್ಕೆ 28 ಕೋಟಿ ಪ್ರವಾಸಿಗರು ಬರುತ್ತಾರೆ. ಇದರಲ್ಲಿ 4.10 ಲಕ್ಷ ವಿದೇಶಿ ಪ್ರವಾಸಿಗರು ಮಾತ್ರ ಇದ್ದಾರೆ. ರಾಜ್ಯದಲ್ಲಿ 319 ಪ್ರವಾಸಿ ತಾಣಗಳಿಗೆ ಮೂಲ ಸೌಕರ್ಯ ಕಲ್ಪಿಸಿದರೆ ಮಾತ್ರ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲಿದೆ ಎಂದರು.  ಸಾಮಾಜಿಕ ಜಾಲತಾಣಗಳಲ್ಲಿ ಚರಿತ್ರೆ ತಿರುಚುತ್ತಿದ್ದಾರೆ. ಇದರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್​ನ ದಣ ಪ್ರಾದೇಶಿಕ ಕೇಂದ್ರ ನಿರ್ದೇಶಕ ಡಾ.ಎಸ್​.ಕೆ.ಅರುಣಿ ಹೇಳಿದರು. ಜೈನ್​ ಡೀಮ್ಡ್​ ವಿವಿಯ ಡಾ.ಆಶಾ ರಾಜೀವ್​, ರಾಷ್ಟ್ರೀಯ ಗ್ರಾಮೀಣ ವಿಕಾಸ ಕೇಂದ್ರ ಉಪಾಧ್ಯ ಟಿ.ಎನ್​.ಪ್ರವಿಣ್​ ಕುಮಾರ್​, ರಾಜ್ಯ ಹೋಟೆಲ್​ಗಳ ಸಂದ ಅಧ್ಯಕ್ಷ ಜಿ.ಕೆ.ಶೆಟ್ಟಿ ಮತ್ತಿತರರಿದ್ದರು.