ಜಿಲ್ಲೆ

ಬಿಜೆಪಿಯಲ್ಲಿ ನಾಯಕತ್ವಕ್ಕೆ ಕೊರತೆಯಿಲ್ಲ

ವಿಜಯಪುರ: ಹಿಂದುತ್ವಕ್ಕೆ ಅಂಟಿಕೊಂಡ ಹಿನ್ನೆಲೆಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲರ ಹೇಳಿಕೆಯಿಂದ ಕಾಂಗ್ರೆಸ್​ ಪಕ್ಕೆ ಹಿಂದುತ್ವ ಬೇಕಿಲ್ಲ ಎಂದು ಸಾಬೀತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ ಹೇಳಿದರು.

ಬಿಜೆಪಿ ನಾಯಕತ್ವ ಕುರಿತು ಸಚಿವ ಎಂ.ಬಿ. ಪಾಟೀಲರು ಪ್ರಶ್ನಿಸಿದ್ದಾರೆ. ಈ ವೇಳೆ ಯತ್ನಾಳರು ಹಿಂದುತ್ವ ಅಂಟಿಕೊಂಡಿರುವ ಕಾರಣ ಅವರನ್ನು ಕಾಂಗ್ರೆಸ್​ ಪಕ್ಕೆ ಸೇರಿಸಲ್ಲ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆಯು ಕಾಂಗ್ರೆಸ್​ ಹಿಂದುತ್ವದ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎಂಬ ಸಚಿವ ಎಂ.ಬಿ. ಪಾಟೀಲರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಜಿಲ್ಲೆಯಲ್ಲಿ ಬಿಜಿಪಿ ಬಲಿಷ್ಠವಾಗಿದ್ದು, ಪದ ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರೇ ನಾಯಕರು, ಕಾಂಗ್ರೆಸ್​ ಪದಲ್ಲಿಯೇ ನಾಯಕತ್ವದ ಕೊರತೆ ಇದೆ ಹೊರತು ಬಿಜೆಪಿಗೆ ಅಲ್ಲ. ಅಲ್ಲದೆ, ಕಾಂಗ್ರೆಸ್​ನಲ್ಲಿ ಮನೆಯೊಂದು ಮೂರು ಬಾಗಿಲು ಎಂಬ ಪರಿಸ್ಥಿತಿ ಇದೆ. ಅವರಲ್ಲಿ ಡಿ.ಕೆ. ಶಿವಕುಮಾರ, ಸಿ.ಎಂ. ಸಿದ್ದರಾಮಯ್ಯ ಹಾಗೂ ತಟಸ್ಥರ ಬಣಗಳಿವೆ ಎಂದು ದೂರಿದರು.

ಕಳೆದ ಚುನಾವಣೆಯಲ್ಲಿ ಗುತ್ತಿಗೆದಾರರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಸದ್ಯ ಅವರನ್ನು ಮರೆತಿದೆ. ಹಿಂದೆ ಬಿಜೆಪಿ ಸರ್ಕಾರದ 40 ಪರ್ಸೆಂಟ್​ ಆರೋಪ ಮಾಡಿದದ್ದರು. ಸದ್ಯ ಕಾಂಗ್ರೆಸ್​ ಸರ್ಕಾರದ ಮೇಲೆ 60 ಪರ್ಸೆಂಟ್​ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್​ನವರಿಗೆ ಪ್ರದಾನಿ ನರೇಂದ್ರ ಮೋದಿ ಕಂಡರೆ ಭಯ. ಆ ಕಾರಣಕ್ಕಾಗಿಯೇ ಜನ ಔಷಧಿ ಕೇಂದ್ರಗಳನ್ನು ಬಂದ್​ ಮಾಡಲು ನಿರ್ಧರಿಸಿದ್ದು, ಹೀಗಾಗಿ ಬಡವರಿಗೆ ಅನುಕೂಲಕರವಾದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನು ಬಂದ್​ ಮಾಡುವ ಕೆಟ್ಟ ನಿರ್ಧಾರ ಕೈಗೊಂಡಿದೆ ಎಂದರು.

* ಯತ್ನಾಳ ಮರು ಸೇರ್ಪಡೆ ವಿರೋಧಿಸಲ್ಲ

ಪದಿಂದ ಉಚ್ಚಾಟನೆಯಾಗಿರುವ ಶಾಸಕ ಯತ್ನಾಳ ಅವರ ಮರು ಸೇರ್ಪಡೆ ವಿಚಾರ ಪದ ಹೈಕಮಾಂಡ್​ಗೆ ಬಿಟ್ಟ ವಿಚಾರ. ಹೈಕಮಾಂಡ್​ ನಿರ್ಧಾರಕ್ಕೆ ನಾವು ಬದ್ದವಾಗಿದ್ದು, ಯತ್ನಾಳರ ಮರು ಸೇರ್ಪಡೆಗೆ ನಾವು ವಿರೋಧಿಸುವುದಿಲ್ಲ ಎಂದರು.

ಆದರೆ ಯತ್ನಾಳ ಮರು ಸೇರ್ಪಡೆ ಅಷ್ಟು ಸುಲಭವಾದ ವಿಷಯವಲ್ಲ. ಈ ಸಲ ಸಾಕಷ್ಟು ಸಮಯ ನೀಡಿಯೇ ಉಚ್ಚಾಟಿಸಲಾಗಿದೆ. ಹಲವು ಬಿರುಸಿನ ಟನೆಗಳ ನಂತರ ಉಚ್ಚಾಟನೆ ನಡೆದಿದೆ. ಆದರೆ ಹೈಕಮಾಂಡ್​ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ದ ಎಂದರು.

ಬಿಜೆಪಿ ಸಹಕಾರಿ ಪ್ರಕೋಷ್ಠ ರಾಜ್ಯ ಸಂಚಾಲಕ ಸಂಜಯ ಪಾಟೀಲ ಕನಮಡಿ, ಪಾಲಿಕೆ ಸದಸ್ಯ, ನಗರ ಮಂಡಳ ಅಧ್ಯ ಮಳುಗೌಡ ಪಾಟೀಲ ಪತ್ರಿಕಾಗೋಷ್ಠಿಯಲ್ಲಿದ್ದರು.