There is no poverty for working people  
ಜಿಲ್ಲೆ

ಶ್ರಮ ಜೀವಿಗಳಿಗಿಲ್ಲ ಬಡತನ

Vijayapura - Desk - Doddanagouda Gudihindin

ರಬಕವಿ/ಬನಹಟ್ಟಿ: ಶ್ರಮಜೀವಿಗಳಿಗೆ ಬಡತನ, ದಾರಿದ್ರೃ ಬರುವುದಿಲ್ಲವೆಂದು ಮಕ್ಕಳ ಸಂಗಮ ಅಧ್ಯಕ್ಷ ಜಯವಂತ ಕಾಡದೇವರ ಹೇಳಿದರು.

ಸಮೀಪದ ಮದನಮಟ್ಟಿಯ ಬುಧವಾರ ಸದ್ಗುರು ಲಿಂಗರಾಜ ಶಿವಯೋಗಾಶ್ರಮದಲ್ಲಿ 11ನೇ ರಥೋತ್ಸವದಲ್ಲಿ ಮಾತನಾಡಿದ ಅವರು, ಪರಮಾತ್ಮನ ಒಲುಮೆಗೆ ಅಧಿಕಾರ, ಅಂತಸ್ತು, ಶ್ರೀಮಂತಿಕೆ ಬೇಕಿಲ್ಲ. ಪ್ರೇಮ, ಭಕ್ತಿ, ದಾನ, ಧರ್ಮ, ಪರೋಪಕಾರ ಕಾರ್ಯ ಮಾಡಿದರೆ ಸಾಕು ದೇವರ ಕೃಪೆಗೆ ಪಾತ್ರವಾಗಬಹುದು ಎಂದರು.

ಮೀನಾಕ್ಷಿ ಸವದಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ-ಬೆಳೆಸಲು ಮಠಗಳು ಮುಂದೆ ಬರಬೇಕು. ನಿತ್ಯದ ಬದುಕಿಕೆ ಆಧ್ಯಾತ್ಮದ ಅರಿವು ಅವಶ್ಯ. ಮನಸ್ಸಿಗೆ ನೆಮ್ಮದಿ ದೊರಕಲು ನಿತ್ಯ ಯೋಗ, ಧ್ಯಾನ ನಿಸರ್ಗದೊಂದಿಗೆ ಬೆರೆತರೆ ಬದುಕು ಸುಂದರ ಮತ್ತು ಆರೋಗ್ಯಕರವಾಗಿರುತ್ತದೆ ಎಂದರು.

ಈ ಸಂದರ್ಭದಲ್ಲಿ ಡಾ. ಶಿವಪ್ರಕಾಶ ತುಕ್ಕನ್ನವರ, ಶ್ರೀಶೈಲ ಬುರ್ಲಿ, ಸುರೇಶ ಅಕ್ಕಿವಾಟ, ಜಯವಂತ ಮಿಳ್ಳಿ, ಶಂಕರ ಜಿಡ್ಡಿಮನಿ, ರವಿ ಬಾಡಗಿ, ಸಾವಿತ್ರಿ ಪಾಟೀಲ, ಈಶ್ವರ ಪಾಟೀಲ, ಶಂಕರ ಕೆಸರಗಪ್ಪ, ಪವಿತ್ರಾ ತುಕ್ಕನ್ನವರ, ವೀರೇಶ ಆಸಂಗಿ, ರವೀಂದ್ರ ಬಾಡಗಿ, ವೈಷ್ಣವಿ ಬಾಗೇವಾಡಿ ಸೇರಿದಂತೆ ಅನೇಕರಿದ್ದರು.