ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ 
ಜಿಲ್ಲೆ

ಹಳೇ ಜೈಲು ಆವರಣಕ್ಕೆ ಅಲ್ಲಮಪ್ರಭು ಹೆಸರಿಗೆ ವಿರೋಧವಿಲ್ಲ

ಶಿವಮೊಗ್ಗ: ಹಳೇ ಜೈಲು ಆವರಣಕ್ಕೆ ಪ್ರಜಾಪ್ರಭುತ್ವದ ಮೊದಲ ಮಾದರಿ ಅನುಭವ ಮಂಪಟದ ಪ್ರಥಮ ಅಧ್ಯಕ್ಷ ಅಲ್ಲಮಪ್ರಭು ಹೆಸರೇ ಸೂಕ್ತ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ಯುವನಿಧಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಅಲ್ಲಮಪ್ರಭು ಹೆಸರನ್ನು ಕ್ಯಾಬಿನೆಟ್‌ನಲ್ಲಿ ಅಂತಿಮಗೊಳಿಸುವ ಬಗ್ಗೆ ಹೇಳಿದ್ದಾರೆ. ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಳೇ ಜೈಲು ಆವರಣಕ್ಕೆ ಅಲ್ಲಮಪ್ರಭು ಹೆಸರನ್ನು ನಾಮಕಾರಣ ಮಾಡಬೇಕೆಂದು 2019ರಲ್ಲಿ ನಡೆದಿದ್ದ ಸಮಾರಂಭದಲ್ಲೇ ಸುತ್ತೂರು ಶ್ರೀಗಳು ಮತ್ತು ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಹಾಗಾಗಿ ಪ್ರೀಡಂಪಾರ್ಕ್‌ಗೆ ಅಲ್ಲಮಪ್ರಭು ಹೆಸರಿಡಬೇಕು ಎಂಬುದು ನಮ್ಮ ಒತ್ತಾಯ ಕೂಡ ಆಗಿದೆ ಎಂದರು.
ಇದೇ ವೇಳೆ ಹಳೇ ಜೈಲು ಆವರಣವನ್ನು ಸಾರ್ವಜನಿಕ ಬಳಕೆಗೆ ಬಿಟ್ಟುಕೊಟ್ಟಿದ್ದು ನಮ್ಮ ಸರ್ಕಾರವೆಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಆದರೆ ಅದು ಅವರ ತಪ್ಪು ಗ್ರಹಿಕೆಯಾಗಿದೆ. ಅದು 2009ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಆದೇಶ ಮಾಡಿಸಿದ್ದರು. ಇದು ಸಿಎಂಗೆ ತಿಳಿದಿಲ್ಲ. ಜತೆಗಿದ್ದವರೂ ಸರಿಯಾದ ಮಾಹಿತಿ ನೀಡಿಲ್ಲ ಎಂದರು.