ಕಂದಗನೂರ ಗ್ರಾಮದ ವರಮಾರುತೇಶ್ವರ ದೇವಸ್ಥಾನದಲ್ಲಿ ನಡೆಯತ್ತಿರುವ ಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಪ್ರವಚನದಲ್ಲಿ ಶರಣಬಸವೇಶ್ವರರ ವಿವಾಹದ ರೂಪಕ ನೆರವೇರಿಸಲಾಯಿತು. ಮಹಾದೇವಯ್ಯ ಶಾಸ್ತ್ರಿಗಳು, ಮುದೂರ, ಕಂದಗನೂರ ಗ್ರಾಮದ ಮುತೆದೆಯರು ಪಾಲ್ಗೊಂಡಿದ್ದರು. 
ಜಿಲ್ಲೆ

ಗುಣ ನೋಡಿ ಕನ್ಯೆ ಕೊಡುವ ಪದ್ಧತಿ ಈಗಿಲ್ಲ

ಮುದ್ದೇಬಿಹಾಳ: ಗುಣ ನೋಡಿ ಕನ್ಯೆ ಕೊಡುವ ವ್ಯವಸ್ಥೆ ಈಗ ಕಡಿಮೆಯಾಗಿದೆ. ಕಣ್ಣು, ಬಣ್ಣ, ಮೂಗು ನೋಡಿ ಹೆಣ್ಣು ಕೊಡುವ ಸಂಸತಿ ಬಂದಿದೆ. ಶರಣರ ಕಾಲದಲ್ಲಿನ ಮದುವೆಗೆ ಸಾಕಷ್ಟು ಮಹತ್ವ ಇತ್ತು. ಈಗಿನ ಕಾಲದ ಮದುವೆಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದು ಶರಣ ಸೋಮನಾಳದ ಪ್ರವಚನಕಾರ ಮಹಾದೇವಯ್ಯಶಾಸ್ತ್ರಿ ಹಿರೇಮಠ ಹೇಳಿದರು.

ಮುದ್ದೇಬಿಹಾಳ ತಾಲೂಕು ಕಂದಗನೂರ ಗ್ರಾಮದ ವರಮಾರುತೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಪ್ರವಚನದಲ್ಲಿ ಸೋಮವಾರ ರಾತ್ರಿ ಶರಣಬಸವೇಶ್ವರರ ಮದುವೆ ರೂಪಕದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಪುರಾಣ, ಪುಣ್ಯಕಥೆ ಕೇಳುವ ಸತ್ಸಂಪ್ರದಾಯ ಇನ್ನೂ ಇದೆ. ಕಂದಗನೂರ, ಮುದೂರ ಗ್ರಾಮಸ್ಥರು ಸೇರಿ ಶರಣಬಸವೇಶ್ವರರ ಮದುವೆ ರೂಪಕದಲ್ಲಿ ವರ ಮತ್ತು ವಧುವಿನ ಕಡೆಯವರಾಗಿ ಭಾಗವಹಿಸಿರುವುದು ಸೌಹಾರ್ದದ ಸಂಕೇತವಾಗಿದೆ.

ಮದುವೆಗಳು ಸಂಪ್ರದಾಯದಂತೆ ನಡೆದಾಗಲೇ ಅವುಗಳಿಗೆ ಅರ್ಥ ಬರುತ್ತದೆ. ಅವುಗಳ ಬಾಳ್ವಿಕೆಯೂ ಬಹುಕಾಲ ಇರುತ್ತದೆ. ಕಂದಗನೂರಲ್ಲಿ ಹಿಂದು, ಮುಸ್ಲಿಮರು ಸೇರಿ ಪ್ರವಚನದ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಸೌಹಾರ್ದದ ಸಂಕೇತ ಎನ್ನಿಸಿಕೊಂಡಿದೆ. ಇದು ಎಲ್ಲ ಗ್ರಾಮಗಳಿಗೂ ಮಾದರಿಯಾಗಿದೆ ಎಂದರು.

ಕಂದಗನೂರ ಗ್ರಾಮಸ್ಥರು ವರ ಶರಣಬಸವೇಶ್ವರರ ಕಡೆಯವರಾಗಿ, ಮುದೂರ ಗ್ರಾಮಸ್ಥರು ವಧುವಿನ ಕಡೆಯವರಾಗಿ ಎದುರುಗೊಳ್ಳುವಿಕೆ, ಮಾತುಕತೆ, ಅರಿಶಿಣ ಹಚ್ಚುವುದರಿಂದ ಹಿಡಿದು ಮಾಂಗಲ್ಯ ಧಾರಣೆವರೆಗೂ ಸಾಂಪ್ರದಾಯಿಕ ಪದ್ಧತಿಗಳನ್ನು ನಡೆಸಿಕೊಟ್ಟರು.

ವರ, ವಧುವಿನ ಗೊಂಬೆಗಳನ್ನು ಮದುಮಕ್ಕಳಂತೆ ಅಲಂಕರಿಸಿದ್ದು ವಿಶೇಷವಾಗಿತ್ತು. ಮುದ್ದೇಬಿಹಾಳದ ಹುಡ್ಕೋದಲ್ಲಿರುವ ವರಮಾರುತೇಶ್ವರ ದೇವಸ್ಥಾನ ಕಮಿಟಿಯವರೂ ಸೇರಿದಂತೆ ಮುದೂರ, ಕಂದಗನೂರ ಗ್ರಾಮಗಳ ಗಣ್ಯರು, ಪ್ರವಚನಕ್ಕೆ ಸಹಕರಿಸಿದವರು ಸೇರಿ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿವನಗೌಡ ಬಿರಾದಾರ, ಸಾಹೇಬಗೌಡ ಪಾಟೀಲ, ಭೀಮನಗೌಡ ಪಾಟೀಲ ಎಸ್​.ಎಸ್​.ಹೂಗಾರ, ಈರನಗೌಡ ಪಾಟೀಲ, ಪಾವಡಸ್ವಾಮಿ ಮಠ, ಶೇಖರಯ್ಯಾ ಮಠ, ರಾಮನಗೌಡ ಬಿರಾದಾರ, ರಾಮನಗೌಡ ಪಾಟೀಲ, ರಾಮನಗೌಡ ಬಳ್ಳಾರಿ, ಸಿದ್ದಣ್ಣ ಮಂಜಿನಾಳ, ಶ್ರೀಶೆಲ ಬಿರಾದಾರ, ಮಾಂತಗೌಡ ಪಾಟೀಲ, ಮೆಬುಸಾಬ ನಾಯ್ಕೋಡಿ, ಚಂದೇಸಾ ವಾಲಿಕಾರ, ಮಲ್ಲನಗೌಡ ಬಿರಾದಾರ, ಬಾಲನಗೌಡ ಬಿರಾದಾರ, ಸುರೇಶ ಸುಳಕೋಡ, ಹಣಮಂತ್ರಾಯ ಕಣಕಾಲ, ಕರಬಸಪ್ಪ ಹಾದಿಮನಿ, ಸಾಬಣ್ಣ ಸಂಗಮ, ಬಸವರಾಜ ಹುಲ್ಲೂರ, ರಸೂಲ ಅಂಗಡಿ, ರಾಮಣ್ಣ ಮಡಿವಾಳರ, ಹಣಮಂತ್ರಾಯ ಮಡಿವಾಳರ, ಭೀಮರಾಯ ಡಮನಾಳ, ಶಂಕರಗೌಡ ಬಿರಾದಾರ, ಶಂಕರಗೌಡ ಎಂ.ಬಿರಾದಾರ, ವಿರುಪಾ ಮಂಜನಾಳ, ಸುರೇಶ ಬಸರಿಗಿಡದ, ವೀರೇಶ ಬಿದರಕುಂದಿ, ನಬೀಸಾ ನಾಯ್ಕೋಡಿ, ಬಂದಗೀಸಾಬ ನಾಯ್ಕೋಡಿ, ಮುರ್ತುಜ ಬೆಣ್ಣೂರ, ಮುರ್ತುಜ ನಾಯ್ಕೋಡಿ, ಅಲ್ಲೀಸಾಬ ನಿಡಗುಂದಿ, ದಾದೇಸಾಬ ಮುಕಿಹಾಳ ಹಲವರು ಪಾಲ್ಗೊಂಡಿದ್ದರು. ಮುಖಂಡ ಶಂಕರಗೌಡ ಶಿವಣಗಿ ತಂಡದವರು ಉಸ್ತುವಾರಿ ನಿರ್ವಹಿಸಿದರು.