ಬಳ್ಳಾರಿ : ಯಾರೂ ಹೆದರಿಸಿದರೂ ನನಗೆ ಭಯವಿಲ್ಲ. ನಾವು ಎಂತೆಂತವರಿಗೋ ಭಯ ಬಿದ್ದಿಲ್ಲ. ಯಾರೋ ಮಾತನಾಡಿದರೆ ಅದಕ್ಕೆ ಭಯಪಡುವುದಿಲ್ಲ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಜನಪರ ಕೆಲಸ ಮಾಡುತ್ತಿರುವುದನ್ನು ನೋಡಿ ಜನಾರ್ದನ ರೆಡ್ಡಿ ಹತಾಶರಾಗಿದ್ದಾರೆ ಎಂದರು.
ಈಚೆಗೆ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ ವರ್ಚುವಲ್ ಮೂಲಕ ಮಾತನಾಡಿ, ಬಳ್ಳಾರಿ ಶಾಸಕರಿಂದ ಕೆಆರ್‌ಪಿ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಆದರೆ ಸುಮ್ಮನಿರಲ್ಲ. ಬಳ್ಳಾರಿಯಿಂದ 60 ಕಿಲೋಮೀಟರ್ ದೂರದಲ್ಲಿದ್ದೇನೆ ಎಚ್ಚರಿಕೆ ಮಾತನಾತನ್ನು ಜನಾರ್ದನ ರೆಡ್ಡಿ ಹೇಳಿದ್ದರು.
ಅದಕ್ಕೆ ತಿರುಗೇಟು ನೀಡಿದ ನಾರಾ ಭರತ್ ರೆಡ್ಡಿ, ನಾವು ಎಂತೆಂತವರಿಗೋ ಭಯ ಬಿದ್ದಿಲ್ಲ, ಇವನ್ಯಾರೋ ಬಂದು ಹೇಳಿದರೆ ಭಯ ಬೀಳುತ್ತೇವೆಯೇ ? ಎಂದು ಹೇಳಿದರು.