ಜಿಲ್ಲೆ

ಗಡಿ ಗ್ರಾಮಗಳಲ್ಲಿ ಮೂಲಸೌಕರ್ಯವೂ ನಾಸ್ತಿ, ರಸ್ತೆ, ಬೀದಿದೀಪ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶಾಲೆಗೂ ಪರದಾಟ

Bengaluru Rural

ನವೀನ್‌ಚಂದ್ರ ಶೆಟ್ಟಿ ಆನೇಕಲ್

ಗ್ರಾಮಗಳ ಉದ್ಧಾರಕ್ಕಾಗಿ ಹತ್ತಾರು ಯೋಜನೆಗಳು ಜಾರಿಗೆ ಬಂದರೂ ರಾಜ್ಯದ ಗಡಿ ಗ್ರಾಮಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಆನೇಕಲ್ ತಾಲೂಕಿನ ವಣಕನಹಳ್ಳಿ, ಸೋಲೂರು ಹಾಗೂ ಸಮಂದೂರು ಗ್ರಾಮಗಳಿಗೆ ಹೋದರೆ ಈ ಮಾತಿಕಗೆ ಸಾಕ್ಷಿ ದೊರೆಯುತ್ತದೆ.

ಈ ಗ್ರಾಮಗಳು ಇದುವರೆಗೂ ಗುಣಮಟ್ಟದ ರಸ್ತೆ, ಬೀದಿ ದೀಪ ಹಾಗೂ ಚರಂಡಿ ವ್ಯವಸ್ಥೆಯಂಥ ಮೂಲಸೌಲಭ್ಯಗಳಿಂದಲೇ ವಂಚಿತವಾಗಿವೆ. ಇಂಥ ಗ್ರಾಮಗಳಿಗೆ ಈಗ ಪಂಚಾಯಿತಿ ಚುನಾವಣೆ ಎದುರಾಗಿದ್ದು ಗಡಿ ಗ್ರಾಮಗಳ ದುಸ್ಥಿತಿಗೆ ಕಾರಣವಾದ ಜನಪ್ರತಿನಿಧಿಗಳಿಗೆ ಪ್ರಶ್ನೆ ಎಸೆಯಲು ಗ್ರಾಮಸ್ಥರು ಸಿದ್ಧವಾಗಿದ್ದಾರೆ.

ಗ್ರಾಮಗಳು ಅಭಿವೃದ್ಧಿ ಹೊಂದಿದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎನ್ನುವ ಮಾತು ಇಲ್ಲಿ ಭಾಷಣಗಳಿಗೆ ಸೀಮಿತವಾಗಿದೆ. ಸೋಲೂರಿನಲ್ಲಿ ಪ್ರಾಥಮಿಕ ಶಾಲೆ ಇದ್ದು, ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಗ್ರಾಮದ ಸುಮಾರು 50 ಮಕ್ಕಳು ಶಾಲೆಗಾಗಿ ನಿತ್ಯ 6 ಕಿ.ಮೀ. ನಡೆದು ವಣಕನಹಳ್ಳಿ ಹಾಗೂ ತೆಲಗರಹಳ್ಳಿ ಸರ್ಕಾರಿ ಶಾಲೆಗೆ ಹೋಗಬೇಕಿದೆ. ಗಡಿ ಗ್ರಾಮಗಳಲ್ಲಿ ಮೂಲಸೌಲಭ್ಯಗಳ ಜತೆಗೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಬೇಕಿದೆ.

ಗಡಿ ಗ್ರಾಮಗಳಲ್ಲಿ ಮಳೆಗಾಲದಲ್ಲ್ಲೂ ಕುಡಿಯುವ ನೀರಿಗೆ ತೊಂದರೆ ಎದುರಾಗಿದೆ. ಗ್ರಾಮ ಪಂಚಾಯಿತಿಯಿಂದ 10ರಿಂದ 12 ದಿನಕೊಮ್ಮೆ ಮಾತ್ರ ನೀರು ಪೂರೈಸಲಾಗುತ್ತದೆ. ರಸ್ತೆಗಳ ಸ್ಥಿತಿ ಹೇಳತೀರದು. ತೋಪಯ್ಯ, ಹೋರಾಟಗಾರ, ಸೋಲೂರು ಚುನಾವಣೆ ವೇಳೆ ಮಾತ್ರ ಜನಪ್ರತಿನಿಧಿಗಳು ಗ್ರಾಮಕ್ಕೆ ಆಗಮಿಸುತ್ತಾರೆ. ನಂತರ ನಿರ್ಲಕ್ಷ್ಯ ವಹಿಸುತ್ತಾರೆ. ಹೀಗಾಗಿ ಗಡಿ ಗ್ರಾಮಗಳು ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿಗೆ ಗಮನ ಹರಿಸುವವರು ಚುನಾವಣೆಯಲ್ಲಿ ಗೆಲ್ಲಬೇಕು. ಮಾದೇಶ್, ಗ್ರಾಮಸ್ಥ, ಸಮಂದೂರು ಗಡಿ ಗ್ರಾಮಗಳ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಲಾಗುವುದು. ಗ್ರಾಮಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಹೆಚ್ಚು ಅನುದಾನ ನೀಡಲಿದೆ. ಎ.ನಾರಾಯಣಸ್ವಾಮಿ, ಸಂಸದ ಆನೇಕಲ್ ತಾಲೂಕಿನ ಗಡಿ ಗ್ರಾಮಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಮರಗಳ ತೆರವು ಕಾರ್ಯಾಚರಣೆ ಆಗದ ಕಾರಣ ವಿಳಂಬವಾಗುತ್ತಿದೆ. ಸರ್ಕಾರಿ ಶಾಲೆ ಅಭಿವೃದ್ಧಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನ ನೀಡಲಾಗುವುದು. ಬಿ.ಶಿವಣ್ಣ ಶಾಸಕ