ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ ಮಾತನಾಡಿದರು. ಮಾಧ್ಯಮ ಪ್ರಮುಖ್ ಕೆ.ವಿ.ಅಣ್ಣಪ್ಪ, ಚಂದ್ರಶೇಖರ್ ಇದ್ದರು. 
ಜಿಲ್ಲೆ

ರಾಘವೇಂದ್ರ ಸಾಧನೆ ಬಗ್ಗೆ ಜನರಲ್ಲಿ ಗೊಂದಲಗಳಿಲ್ಲ

ಶಿವಮೊಗ್ಗ: ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ನಾಯಕರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಘವೇಂದ್ರ ಸಾಧನೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಕಣ್ಣಿಗೆ ಕಟ್ಟಿಕೊಂಡಿರುವ ಬಟ್ಟೆಯನ್ನು ತೆಗೆದು ನೋಡಬೇಕಿದೆ ಎಂದು ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ ತಿರುಗೇಟು ನೀಡಿದರು.

ಮಾತನಾಡುವುದೇ ಸಾಧನೆ ಆಗಬಾರದು, ಸಾಧನೆಗಳೇ ಮಾತನಾಡಬೇಕು ಎಂದು ನಮ್ಮ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಯಾವಾಗಾಲೂ ಹೇಳುತ್ತಲೇ ಇರುತ್ತಾರೆ. ರಾಘವೇಂದ್ರ ಸಾಧನೆ ಬಗ್ಗೆ ಸಾಮಾನ್ಯ ಜನರಲ್ಲಿ ಯಾವುದೇ ಗೊಂದಲಗಳಿಲ್ಲ. ಸಿಗಂದೂರು ಸೇತುವೆ ನಿರ್ಮಾಣ, ಭದ್ರಾವತಿ ವಿಐಎಸ್‌ಎಲ್ ಉಳಿಸುವ ಪ್ರಯತ್ನ ಒಳಗೊಂಡಂತೆ ಸಾಕಷ್ಟು ಶ್ರಮ ಹಾಕಿದ್ದಾರೆ. ಪಟ್ಟಿ ಮಾಡಲು ಆಗದಷ್ಟು ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಆಗಿವೆ ಎಂದರು.
ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದರೆ ಕೇವಲ ಸರ್ಕಾರಿ ಕೆಲಸ ಕೊಡಿಸುವುದಲ್ಲ. ಕೈಗಾರಿಕೆಗಳ ಸ್ಥಾಪನೆ, ಸ್ವಯಂ ಉದ್ಯೋಗ ಕಲ್ಪಿಸುವುದೂ ಒಳಗೊಂಡಿರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ಕಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷದಲ್ಲಿ ನಿರಂತರವಾಗಿ ಶ್ರಮ ಹಾಕಿದ್ದಾರೆ ಎಂದರು.