ಸೋಮವಾರಪೇಟೆ ಚಿಕ್ಕಬಸಪ್ಪ ಕ್ಲಬ್ ಎದುರು ಕೊಡಗು ವಿಮೆನ್ಸ್ ಕಾಫಿ ಅವೇರ್‌ನೆಸ್ ಸಂಸ್ಥೆಯ ತಾಲೂಕು ಘಟಕದ ವತಿಯಿಂದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಕಾಫಿ ವಿತರಿಸಲಾಯಿತು. ಬಿಸ್ವಾಸ್, ಮಹೇಶ್, ಶ್ಯಾಮ್,ರಾಣಿ ಇದ್ದರು. 
ಜಿಲ್ಲೆ

ದೇಶದಲ್ಲಿ ಕಾಫಿ ಬಳಕೆ ಹೆಚ್ಚಿಸುವುದು ಅಗತ್ಯ

ಸೋಮವಾರಪೇಟೆ: ಕೊಡಗು ವಿಮೆನ್ಸ್ ಕಾಫಿ ಅವೇರ್‌ನೆಸ್ ಸಂಸ್ಥೆಯ ತಾಲೂಕು ಘಟಕದ ವತಿಯಿಂದ ಪಟ್ಟಣದ ಚಿಕ್ಕಬಸಪ್ಪ ಕ್ಲಬ್ ಮುಂಭಾಗದಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.

ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಬಿಸ್ವಾಸ್ ಮಾತನಾಡಿ, ಕೊಡಗು ಕಾಫಿ ಬೆಳೆಯಲು ಉತ್ತಮ ಪರಿಸರ ಹೊಂದಿದ್ದು, ನೆರಳಿನಲ್ಲಿ ಬೆಳೆಯುವ ಕಾಫಿ ಉತ್ತಮ ಸ್ವಾದದೊಂದಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಬೆಳಗ್ಗೆ ಮತ್ತು ಸಂಜೆ ಕಾಫಿ ಸೇವನೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಬಾಧಿಸುವುದಿಲ್ಲ. ಮೊದಲು ಕಾಫಿಯನ್ನು ದೇಶದಲ್ಲಿ ಬಳಕೆ ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದರು.

ಭಾರತದ ಕಾಫಿಗೆ ಮೊದಲು ಸ್ಥಳೀಯವಾಗಿ ಮನ್ನಣೆ ದೊರಕಿಸುವ ಮೂಲಕ ಬಳಕೆದಾರರನ್ನು ಹೆಚ್ಚಿಸುವ, ಕಾಫಿ ಸೇವನೆಯನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಜಂಟಿ ಕಾರ್ಯದರ್ಶಿ ರಾಣಿ ನರೇಂದ್ರ ಹೇಳಿದರು.

ಕಾರ್ಯಕ್ರಮಕ್ಕೆ ಚಿಕ್ಕಬಸಪ್ಪ ಕ್ಲಬ್ ಅಧ್ಯಕ್ಷ ಮಹೇಶ್ ಚಾಲನೆ ನೀಡಿದರು. ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ, ಪೊಲೀಸ್ ಠಾಣೆ, ಆಟೋ ನಿಲ್ದಾಣ ಸೇರಿದಂತೆ ಸಾರ್ವಜನಿಕರಿಗೆ ಸಂಸ್ಥೆಯ ಮಹಿಳಾ ಕಾಫಿ ಬೆಳೆಗಾರರು 750 ಕಪ್ ಕಾಫಿಯನ್ನು ಉಚಿತವಾಗಿ ವಿತರಿಸಿದರು.

ಮಡಿಕೇರಿಯ ಕಾಫಿ ಬೆಳೆಗಾರರ ಸಂಘದ ಶ್ಯಾಮ್ ಪೊನ್ನಪ್ಪ, ಅನುರಾಧಾ ವಿಕ್ರಂ, ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಮತ್ತು ಪದಾಧಿಕಾರಿಗಳು, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಕಾರ್ಯದರ್ಶಿ ಜ್ಯೋತಿ ಶುಭಾಕರ್ ಇತರರು ಇದ್ದರು.