ಶೃಂಗೇರಿ ತಾಲೂಕಿನ ತಾರೊಳ್ಳಿಕೊಡಿಗೆಯಲ್ಲಿ ಕಾಡಾನೆ ಅಡಕೆ, ಬಾಳೆ ಬೆಳೆ ನಾಶಪಡಿಸಿರುವುದು. 
ಜಿಲ್ಲೆ

ತಾರೊಳ್ಳಿಕೊಡಿಗೆಯಲ್ಲಿ ಕಾಡಾನೆ ಹಾವಳಿ

ಎಸ್.ಎನ್.ರವೀಂದ್ರ

ಶೃಂಗೇರಿ: ಬೇಗಾರು ಗ್ರಾಮ ಪಂಚಾಯಿತಿ ತಾರೊಳ್ಳಿಕೊಡಿಗೆ ಗ್ರಾಮದ ತೋಟದಲ್ಲಿ ಕಾಡಾನೆ ದಾಳಿಯಿಂದ ಬೆಳೆ ನಾಶವಾಗಿದೆ.

ತಾರೊಳ್ಳಿಕೊಡಿಗೆ ರಾಮಪ್ಪ ಮತ್ತು ಶ್ರೀನಿವಾಸ ಎಂಬುವರ ತೋಟಗಳಲ್ಲಿ ಕಾಡಾನೆ ಅಡಕೆ ಸಸಿ, ಬಾಳೆ, ಕಾಳುಮೆಣಸಿನ ಬಳ್ಳಿಯನ್ನು ನಾಶಮಾಡಿದೆ. ಕಳೆದ ವಾರ ಸಮೀಪದ ತೋಟಕ್ಕೆ ಬಂದ ಕಾಡಾನೆ ಬೆಳೆ ಧ್ವಂಸಗೊಳಿಸಿತ್ತು. ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ.