ಜಿಲ್ಲೆ

ಜಗತ್ತಿನಲ್ಲಿ ಮನುಷ್ಯ ರೂಪದಲ್ಲಿವೆ ಕಾಡುವ ಪ್ರಾಣಿಗಳು

ನರೇಗಲ್ಲ: ಜಗದ ಜನರ ಮನಶಾಂತಿಯನ್ನು ಕದಡುವ ಕಾಡುವ ಪ್ರಾಣಿಗಳು ಮನುಷ್ಯ ರೂಪದಲ್ಲಿಯೇ ಇವೆ ಎಂದು ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸೈಬರ್‌ಟೆಕ್ ಕಂಪ್ಯೂಟರ್‌ನ ರಜತ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಇನ್ನೊಬ್ಬರ ಏಳಿಗೆಯನ್ನು ಕಂಡು ಕಮರುವ, ಹೊಟ್ಟೆಕಿಚ್ಚುಪಡುವ ಪ್ರಾಣಿ ಯಾವುದಾದರೂ ಇದ್ದರೆ ಅದು ಮನುಷ್ಯ ಎಂದರು.

ನಿಸರ್ಗವು ಮನುಷ್ಯನಿಗೆ ಎಲ್ಲವನ್ನೂ ಕೊಟ್ಟಿದೆ. ಅದರಿಂದ, ಆತ ಪಾಠ ಕಲಿಯಬೇಕು. ನಿಸರ್ಗದಿಂದ ಪಾಠ ಕಲಿಯದ ಮನುಷ್ಯ ಎಲ್ಲವನ್ನೂ ಕಳೆದುಕೊಂಡಂತೆ. ಒಂದು ವೇಳೆ ಮನುಷ್ಯ ನಿಸರ್ಗದಿಂದ ಪಾಠ ಕಲಿಯಲು ನಿರಾಕರಿಸಿದರೆ ಅದೇ ಅವನಿಗೆ ಉತ್ತಮ ಪಾಠ ಕಲಿಸುತ್ತದೆ ಎಂದು ಶ್ರೀಗಳು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಇಂದು ತಂತ್ರಜ್ಞಾನ ಕಲಿಯದ ಮನುಷ್ಯ ಯಾವುದಕ್ಕೂ ಉಪಯೋಗವಿಲ್ಲ ಎನ್ನುವಂತಾಗಿದ್ದಾನೆ ಎಂದರು.

ನೇತೃತ್ವ ವಹಿಸಿದ್ದ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿದರು. ಎಸ್.ಎ. ಕಾಲೇಜಿನ ಪ್ರಾಚಾರ್ಯ ವೈ. ಸಿ. ಪಾಟೀಲರಿಗೆ ಸೈಬರ್‌ಟೆಕ್ ವಿದ್ಯಾರ್ಥಿಗಳಿಂದ ಗುರುವಂದನೆ, ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳ ಪುತ್ಥಳಿಯ ತುಲಾಭಾರ ಜರುಗಿತು.

ದರಗಾದ ಶರಣರಾದ ಮಂಜೂರಹುಸೇನ್ ಶಾವಲಿ, ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಡಾ. ಕೆ. ಬಿ. ಧನ್ನೂರ, ರವೀಂದ್ರನಾಥ ದೊಡ್ಡಮೇಟಿ, ಡಾ. ಜಿ. ಕೆ. ಕಾಳೆ, ಬಂಡಿ ಸಿದ್ದಣ್ಣ, ಮುತ್ತಣ್ಣ ಕಡಗದ, ಶಶಿಧರ ದಿಂಡೂರ, ಕುಮಾರ ಗಡಗಿ ಮುಂತಾದವರಿದ್ದರು. ರಾಘವೇಂದ್ರ ಕೌಜಗೇರಿ, ಹಳೆಯ ವಿದ್ಯಾರ್ಥಿಗಳಾದ ಅಭಿಷೇಕ ಇನಾಮದಾರ, ಎಸ್. ಬಿ. ಅಂಗಡಿ, ರೂಪಾ ಶೆಟ್ಟರ ಅನಿಸಿಕೆ ವ್ಯಕ್ತಪಡಿಸಿದರು. ನಂದೀಶ ಅಚ್ಚಿ ಸ್ವಾಗತಿಸಿದರು. ವಿರುಪಾಕ್ಷಿ ಸಂಗನಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಹೊನವಾಡ ನಿರೂಪಿಸಿದರು.

ವಿಜಯವಾಣಿ ಚಿತ್ರ

ಫೊಟೋ ಶೀರ್ಷಿಕೆ 11ಎನ್‌ಆರ್‌ಜಿಎಲ್1)

ನರೇಗಲ್ಲನ ಸೈಬರ್‌ಟೆಕ್ ಕಂಪ್ಯೂಟರ್‌ನ ರಜತಮಹೋತ್ಸವದಲ್ಲಿ ಗವಿಸಿದ್ಧೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಮುಪ್ಪಿನ ಬಸವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯರು, ಮಂಜೂರಹುಸೇನ್ ಶಾವಲಿ, ಫಕೀರಪ್ಪ ಮಳ್ಳಿ ಇತರರಿದ್ದರು.