ಹೆಬ್ರಿ: ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕೆಲಸ ಕೆಳಪೇಟೆಯಲ್ಲಿ ನಡೆಯುತ್ತಿದ್ದು, ಉಡುಪಿ ಮಣಿಪಾಲಕ್ಕೆ ಬದಲಿ ಮಾರ್ಗವಾಗಿ ಬ್ರಹ್ಮಾವರ ರಸ್ತೆಯಿಂದ ಸಂಚರಿಸಬೇಕಿದೆ. ಈ ಮಾರ್ಗವು ಟ್ರಾಫಿಕ್ ಕಿರಿಕಿರಿ, ಹೊಂಡಗುಂಡಿಗಳಿಂದ ತುಂಬಿದೆ. ಕಾಲೇಜು ರಸ್ತೆಯಲ್ಲಿ ಏಕಮುಖ ಸಂಚಾರ ನಡೆಯುತ್ತಿದ್ದು, ಮಾರ್ಗ ಕಿರಿದಾಗಿರುವುದರಿಂದ ಅಪಘಾತದ ಭೀತಿ ಹೆಚ್ಚಿದೆ. ಜತೆಗೆ ವಿಪರೀತ ಧೂಳು ಇದ್ದು, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೂ ತೊಂದರೆ ಉಂಟಾಗುತ್ತಿದೆ. ಶೀಘ್ರ ಎಲ್ಲ ಸಮಸ್ಯೆಗಳಿಗೆ ಆಡಳಿತ ವರ್ಗ ಮುಕ್ತಿ ನೀಡದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಶ್ರೀಕಾಂತ ಪೂಜಾರಿ ಎಚ್ಚರಿಸಿದ್ದಾರೆ.