ಜಿಲ್ಲೆ

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲ

ತೇರದಾಳ: ರಾಜಕೀಯ ಕ್ಷೇತ್ರ ಬೇರೆ. ಸಹಕಾರಿ ಕ್ಷೇತ್ರ ಬೇರೆ. ಆದರೆ, ಸಹಕಾರಿ ಕ್ಷೇತ್ರದಲ್ಲೂ ರಾಜಕೀಯಕ್ಕಿಂತಲೂ ಜಿದ್ದಾಜಿದ್ದಿ ನಡೆಯುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ ಶಾಸಕ ಸಿದ್ದು ಸವದಿ ಹೇಳಿದರು.

ಬಿಡಿಸಿಸಿ ಬ್ಯಾಂಕ್‌ಗೆ ಪಿಕೆಪಿಎಸ್ ಕ್ಷೇತ್ರದಿಂದ ಆಯ್ಕೆಗೊಂಡ ಬಳಿಕ ಪಟ್ಟಣದ ಪಿಕೆಪಿಎಸ್ ಬ್ಯಾಂಕ್‌ಗೆ ಶುಕ್ರವಾರ ಭೇಟಿ ನೀಡಿದಾಗ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪಿಕೆಪಿಎಸ್ ಬ್ಯಾಂಕ್‌ಗಳಲ್ಲಿನ ರೈತರ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡಲಾಗುವುದು. ಬ್ಯಾಂಕ್‌ಗಳ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದು ಎಂದು ಹೇಳಿದರು.

ಬಸ್ ನಿಲ್ದಾಣ ಬಳಿಯ ಪಿಕೆಪಿಎಸ್ ಅಧ್ಯಕ್ಷ ಭೂಪಾಲ ಶೇಡಬಾಳ, ವಿಜಯ ಶಿರಗಾಂವಿ, ಜಿನ್ನಪ್ಪ ಸವದತ್ತಿ, ಬಾಹುಬಲಿ ಗರಗಟ್ಟಿ, ಸುಭಾಸ ಗಾತಾಡೆ, ಆನಂದ ಕಂಪು, ಮಹಾವೀರ ಕೊಕಟನೂರ, ಶ್ರೀಶೈಲ ತೆಳಗಿನಮನಿ, ಶೀತಲ ಬೋಳಗೊಂಡ ಇತರರಿದ್ದರು.

EndFragment