ಜಿಲ್ಲೆ

ಸವದತ್ತಿಗೆ ಪಾದಯಾತ್ರೆ

ತೇರದಾಳ: ಪಟ್ಟಣದ ಯಲ್ಲಮ್ಮದೇವಿ ಪಲ್ಲಕ್ಕಿ (ಜಗ) ಉತ್ಸವದೊಂದಿಗೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ಭಕ್ತರು ಶನಿವಾರ ಸವದತ್ತಿಯತ್ತ ಪಾದಯಾತ್ರೆ ಬೆಳೆಸಿದರು. ಪ್ರಸ್ತುತ ಕೋವಿಡ್-19 ನಿಯಮಾವಳಿಯಂತೆ ಭಕ್ತರಿಗೆ ಸವದತ್ತಿ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಯಲ್ಲಮ್ಮ ತಾಯಿಯ ಭೂಮಿಯನ್ನಾದರೂ ಸ್ಪರ್ಶ ಮಾಡಿ ದರ್ಶನ ಪಡೆದು ಬರುತ್ತೇವೆಂದು ನೂರಾರು ಭಕ್ತರು ಸುಕ್ಷೇತ್ರಕ್ಕೆ ತೆರಳಿದರು. ಪಾದಯಾತ್ರಿಗಳ ಪಾದಗಳಿಗೆ ಪಟ್ಟಣದಲ್ಲಿ ನೀರು ಹಾಕಿ ಬೀಳ್ಕೊಡಲಾಯಿತು. ಕಲ್ಲಟ್ಟಿಯ ಭಕ್ತರೊಂದಿಗೆ ಗೋಲಭಾವಿ-ಕಾಲತಿಪ್ಪಿ ಮಾರ್ಗವಾಗಿ ಅಂದಾಜು 100 ಕಿ.ಮೀ. ಕ್ರಮಿಸುವ ದಾರಿಯಲ್ಲಿ ಪಾದಯಾತ್ರಿಗಳು ಮೂರು ವಸ್ತಿಗಳನ್ನು ಮಾಡಿ ಹುಣ್ಣಿಮೆ ದಿನ ಸವದತ್ತಿ ತಲುಪುತ್ತಾರೆ.