ಜಿಲ್ಲೆ

ತೆಂಕಪೇಟೆ ದೇವಳದಲ್ಲಿ ಮುಂಜಾನೆ ದೀಪೋತ್ಸವ

Udupi

ಉಡುಪಿ: ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಭಾನುವಾರ ಮುಂಜಾನೆ ಪಶ್ಚಿಮ ಜಾಗರ ಪೂಜೆ, ಸುಪ್ರಭಾತ, ಕಾಕಡ ಆರತಿಯೊಂದಿಗೆ ಸಾವಿರಾರು ಹಣತೆಗಳ ದೀಪೋತ್ಸವ ಜರುಗಿತು.

ವಿಶೇಷ ಆಕರ್ಷಣೆಯಾಗಿ ಮಹಾಕಾಳಿ ಅವತಾರ, ಗರುಡವಾಹನ ರಂಗೋಲಿಯ ಚಿತ್ತಾರ ಗಮನ ಸೆಳೆಯಿತು. ದಯಘಾನ್ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಆಡಳಿತ ಮೊಕ್ತೇಸರ ಪಿ.ವಿ. ಶೆಣೈ, ಆಡಳಿತ ಮಂಡಳಿ ಸದಸ್ಯ ಗಣೇಶ್ ಕಿಣಿ, ವಸಂತ್ ಕಿಣಿ, ವಿಶ್ವನಾಥ್ ಭಟ್, ನರಹರಿ ಶೆಣೈ, ಮಟ್ಟಾರು ಗಣೇಶ್ ಕಿಣಿ, ಭಾಸ್ಕರ ಶೆಣೈ, ಶ್ಯಾಂಪ್ರಸಾದ್ ಕುಡ್ವ, ಪ್ರದೀಪ್‌ರಾವ್, ಮಟ್ಟಾರು ಸತೀಶ್ ಕಿಣಿ, ಜಿಎಸ್‌ಬಿ ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಸಮಾಜ ಬಂದವರು ಉಪಸ್ಥಿತರಿದ್ದರು. ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯತು.