ಜಿಲ್ಲೆ

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳವು

ಕುದೂರು: ತಾಲೂಕಿನ ತಿಪ್ಪಸಂದ್ರ ಹೋಬಳಿಯ ಜಾನಿಗೆರೆ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿದ್ದಾರೆ.

ಮಗಳ ಹೆರಿಗೆಗೆಂದು ಕುಣಿಗಲ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿದ್ದಾಗ ಹೊಂಚಿ ಹಾಕಿ ಕಳ್ಳರು ಮನೆಯಲ್ಲಿದ್ದ 140 ಗ್ರಾಂ ತೂಕದ ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಜಾನಿಗೆರೆ ಗ್ರಾಮದ ಚಿಕ್ಕರಂಗಯ್ಯ ಕುದೂರು ಠಾಣೆಯಲ್ಲಿ ದೂರಿನಲ್ಲಿ ತಿಳಿಸಿದ್ದಾರೆ.