ಉಡುಪಿ : ನಂದಿಕೂರು ಯು.ಪಿ.ಸಿ.ಎಲ್. ಬಳಿಯ ಮನೆಯಲ್ಲಿ ವೃದ್ದೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ, ಉಚ್ಚಿಲ-ಪಣಿಯೂರು ರಸ್ತೆಯಲ್ಲಿ ಮನೆಯಿಂದ 2,52 ಲಕ್ಷ ರೂ. ಕಳವು, ಪಡುಬಿದ್ರಿ, ಉಚ್ಚಿಲ, ಕಟಪಾಡಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಳಿಪಾಡಿ ಗ್ರಾಮದ ಗುತ್ತಕಾಡು ನಿವಾಸಿ ಮಹಮ್ಮದ್ ಆರೀಫ್ ಅಲಿಯಾಸ್ ಮುನ್ನ (37), ಕಳವಾರ ಕುರ್ಸುಗುಡ್ಡೆ ನಿವಾಸಿ ಮಹಮ್ಮದ್ ಮುನೀರ್ (24), ಅಕ್ಬರ್ (36) ಬಂಧಿತರು.
ಆರೋಪಿಗಳಿಂದ 20 ಗ್ರಾಂ ತೂಕದ ಸಣ್ಣ ಗುಂಡುಗಳಿರುವ ಎರಡು ಎಳೆಯ ಚಿನ್ನದ ಸರ 1, ರೂ. 61,000 ನಗದು, 4ದ್ವಿಚಕ್ರ ವಾಹನ , 1ಆಟೋ ರಿಕ್ಷಾ, 3 ಮೊಬೈಲ್ ಫೋನ್ ಸಹಿತ ಒಟ್ಟು 2,99,190 ಮೌಲ್ಯ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಿವಿಧ ಠಾಣೆಗಳಲ್ಲಿ ಮಹಮ್ಮದ ಆರೀಫ್ ವಿರುದ್ಧ 18, ಮಹಮ್ಮದ್ ಮುನೀರ್ ವಿರುದ್ಧ 8 , ಅಕ್ಬರ್ ಮೇಲೆ 2 ಪ್ರಕರಣ ದಾಖಲಾಗಿದೆ.