ಯಲ್ದೂರು ಗ್ರಾಮದ ಶಿಕ್ಷಕ ರವಿ ಎಂಬುವವರ ತೋಟದ ಜಮೀನಿನಲ್ಲಿ ಶ್ರೀಗಂಧ ಮರಗಳನ್ನು ಕೊಯ್ದುಕೊಂಡು ಹೋಗಲಾಗಿದೆ. 
ಜಿಲ್ಲೆ

ಶ್ರೀಗಂಧ ಮರಗಳ ಕಳವು

Kolar

ಶ್ರೀನಿವಾಸಪುರ: ತಾಲೂಕಿನ ಯಲ್ದೂರು ಶಿಕ್ಷಕ ಹರಿ ಎಂಬುವವರ ತೋಟದ ಜಮೀನಿನಲ್ಲಿ ಭಾನುವಾರ ರಾತ್ರಿ 108 ಶ್ರೀಗಂಧದ ಮರಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಶಿಕ್ಷಕ ಹರಿ ಅವರು 17 ಎಕರೆ ಜಮೀನಿನಲ್ಲಿ 3200 ಶ್ರೀಗಂಧ ಗಿಡಗಳನ್ನು ಹಂತ ಹಂತವಾಗಿ ನೆಟ್ಟು ಬೆಳೆಸಿದ್ದಾರೆ. ಭಾನುವಾರ ದುಷ್ಕರ್ಮಿಗಳ ಕೈಚಳಕದಿಂದ 10 ವರ್ಷ ಪ್ರಾಯದ ಮರಗಳು ಕಳವಾಗಿದ್ದು, ಶ್ರೀನಿವಾಸಪುರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಸರ್ಕಾರವು ನಷ್ಟವಾಗಿರುವುದನ್ನು ಗಮನಿಸಿ ಪರಿಹಾರ ನೀಡುವಂತೆ ಮಾಲೀಕ ಹರಿ ಮನವಿ ಮಾಡಿದ್ದಾರೆ.