ಜಿಲ್ಲೆ

ಹೊಸಬೂದನೂರಿನಲ್ಲಿ ಮನೆಗೆ ಕನ್ನ: ನಗದು, ಚಿನ್ನಾಭರಣ ದೋಚಿದ ಕಳ್ಳರು

ಮಂಡ್ಯ: ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಚಿತ್ರ ನಿರ್ಮಾಪಕನ ಮನೆ ಬಾಗಿಲು ಮುರಿದು 3 ಲಕ್ಷ ರೂ ಮೌಲ್ಯದ ನಗದು, ಚಿನ್ನಾಭರಣ ಕಳ್ಳತನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಚಂದ್ರಶೇಖರ್ ಅವರ ಮನೆಯಲ್ಲಿ ಘಟನೆ ನಡೆದಿದೆ. ನಗದು, ಚಿನ್ನದ ಜತೆಗೆ ಸಿಸಿ ಕ್ಯಾಮೆರಾದ ಡಿವಿಡಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಚಂದ್ರಶೇಖರ್ ಬೆಂಗಳೂರಿನಲ್ಲಿ ವಾಸವಾಗಿದ್ದು, ವಾರಾಂತ್ಯದಲ್ಲಿ ಹೊಸ ಬೂದನೂರು ಗ್ರಾಮಕ್ಕೆ ಬಂದು ವಾಸ್ತವ್ಯ ಮಾಡಿ ತೆರಳುತ್ತಿದ್ದರು. ಆ.5ರಂದು ಕಳ್ಳತನ ನಡೆದಿದೆ ಎಂದು ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.