This is masked man robber with stolen gold. 
ಜಿಲ್ಲೆ

ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಣ್ವತೀರ್ಥದಲ್ಲಿ ಉತ್ತರಪ್ರದೇಶ ನಿವಾಸಿ ಯೋಗೀಶ್ ಎಂಬುವರು ವಾಸಿಸುತ್ತಿರುವ ಬಾಡಿಗೆ ಕೊಠಡಿಗೆ ಹಾಡಹಗಲು ನುಗ್ಗಿದ ಕಳ್ಳರು ಎರಡೂವರೆ ಪವನ್ ಚಿನ್ನಾಭರಣ ಕಳವುಗೈದಿದ್ದಾರೆ. ಯೋಗೀಶ್ ಕುಟುಂಬ ಇಲ್ಲಿ ಕಳೆದ ಹಲವು ವರ್ಷಗಳಿಂದ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಬುಧವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ ವಾಪಸಾಗುವಾಗ ಬೆಡ್‌ರೂಮ್‌ನ ಕಪಾಟಿನಲ್ಲಿರಿಸಿದ್ದ ಚಿನ್ನಾಭರಣ ನಾಪತ್ತೆಯಾಗಿತ್ತು. ಗೋಡೆಗೆ ಅಳವಡಿಸಿದ್ದ ಮರದ ಕಿಟಿಕಿ ತೆರವುಗೊಳಿಸಿ ಕಳವು ನಡೆಸಲಾಗಿದೆ.