ಜಿಲ್ಲೆ

ನಗದು, ಚಿನ್ನಾಭರಣ ಕಳವು

ಮೈಸೂರು: ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು, 10.23 ಲಕ್ಷ ರೂ., ಹಾಗೂ ಚಿನ್ನಾಭರಣ ದೋಚಿದ್ದಾರೆ. ನಾಯ್ಡುನಗರದ ರಹಮತ್ ಉಲ್ಲಾ ಖಾನ್ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಹಮತ್ ಉಲ್ಲಾ ಖಾನ್ ಕುಟುಂಬದವರು ಜೂ.7 ರಂದು ಬನ್ನೂರಿನ ಸಮೀಪವಿರುವ ದರ್ಗಾಕ್ಕೆ ತೆರಳಿದ್ದರು. ಮಾರನೆಯ ದಿನ ವಾಪಸ್ ಮನೆಗೆ ಬಂದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಮನೆಯ ಬಾಗಿಲು ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಅಲ್ಲಿದ್ದ 6.95 ಲಕ್ಷ ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣ ಹಾಗೂ 3.28 ಲಕ್ಷ ರೂ. ನಗದನ್ನು ದೋಚಿದ್ದಾರೆ ಎಂದು ಮನೆ ಮಾಲೀಕರು ದೂರು ನೀಡಿದ್ದಾರೆ.