ಜಿಲ್ಲೆ

ನಗದು ಕಳ್ಳತನ

ಹುಬ್ಬಳ್ಳಿ: ಇಲ್ಲಿನ ಕುಲಕರ್ಣಿ ಹಕ್ಕಲದ ಗೂಡ್ಸ್​ಶೆಡ್ ಮೇನ್ ರೋಡ್​ನಲ್ಲಿ ಮನೆಯೊಂದರ ಹಿತ್ತಲ ಬಾಗಿಲಿನಿಂದ ಪ್ರವೇಶ ಮಾಡಿದ ಕಳ್ಳರು, ಅಲ್ಮೇರಾದಲ್ಲಿದ್ದ 1.30 ಲಕ್ಷ ರೂ. ನಗದು ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ನಡೆದಿದೆ. ಅಜ್ಮೀರ್​ಗೆ ಹೋಗಿ ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಮನೆ ಮಾಲೀಕ ಬಷೀರ್ ಅಹ್ಮದ್, ಶಹರ ಠಾಣೆಗೆ ದೂರು ನೀಡಿದ್ದಾರೆ