ಸಾಂದರ್ಭಿಕ ಚಿತ್ರ 
ಜಿಲ್ಲೆ

ಮೊಬೈಲ್ ಟವರ್‌ನ ಬ್ಯಾಟರಿ ಕಳ್ಳತನ

ಮಂಜುನಾಥ ತಿಮ್ಮಯ್ಯ

ಮೈಸೂರು: ನಗರದ ಜಯಲಕ್ಷ್ಮೀಪುರಂ ಅಂಚೆ ಕಚೇರಿ ಬಳಿ ಇರುವ ಮೊಬೈಲ್ ಟವರ್‌ಗೆ ಅಳವಡಿಸಲಾಗಿದ್ದ 24 ಸಾವಿರ ರೂ. ವೌಲ್ಯದ 6 ಬ್ಯಾಟರಿ ಕಳ್ಳತನ ಮಾಡಲಾಗಿದೆ.

ಟವರ್‌ಗೆ ಅಳವಡಿಸಲು 24 ಬ್ಯಾಟರಿಗಳನ್ನು ಸಂಗ್ರಹಿಸಿಡಲಾಗಿತ್ತು. ಇದೇ ವೇಳೆ ಖದೀಮರು ಅಲ್ಲಿನ ಕಬ್ಬಿಣದ ಜಾಲರಿಯನ್ನು ಕತ್ತರಿಸಿ 6 ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ.

ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.