ಮೈಸೂರು: ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯ ಕೈಯಲ್ಲಿದ್ದ ₹2 ಲಕ್ಷ ಮೌಲ್ಯದ 45 ಗ್ರಾಂ ಚಿನ್ನದ ಸರವಿದ್ದ ಪರ್ಸ್ ಅನ್ನು ಕಳ್ಳತನ ಮಾಡಲಾಗಿದೆ.
ಮಂಡ್ಯ ತಾಲೂಕಿನ ಕೊಮ್ಮೇನಹಳ್ಳಿ ನಿವಾಸಿ ಎಸ್.ಜಿ.ಶೋಭಾ ಅವರು ಮೈಸೂರಿನ ಫರ್ನೀಚರ್ ಮಳಿಗೆಗೆ ಬಂದಿದ್ದರು. ಊರಿಗೆ ಮರಳಲು ಮಂಡ್ಯ ಬಸ್‌ಗೆ ಹತ್ತುವಾಗ ನೂಕು ನುಗ್ಗಲಿನ ನಡುವೆ ಈ ಘಟನೆ ನಡೆದಿದ್ದು, ಸ್ವಲ್ಪ ಸಮಯದ ಬಳಿಕ ಪರ್ಸ್ ಕಳವಾದ ವಿಚಾರ ಇವರ ಗಮನಕ್ಕೆ ಬಂದಿದೆ.
ಇವರು ನೀಡಿದ ದೂರಿನ ಅನ್ವಯ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.