ಶುಂಠಿ ಬೆಳೆ 
ಜಿಲ್ಲೆ

ವಿಠಗೊಂಡನಕೊಪ್ಪದಲ್ಲಿ 9 ಕ್ವಿಂಟಲ್ ಶುಂಠಿ ಕಳ್ಳತನ

ಶಿವಮೊಗ್ಗ: ತಾಲೂಕಿನ ವಿಠಗೊಂಡನಕೊಪ್ಪದ ರೈತರೊಬ್ಬರ ಜಮೀನಿನಲ್ಲಿ ಎರಡು ಬಾರಿ ಲಕ್ಷಾಂತರ ರೂ. ಮೌಲ್ಯದ 9 ಕ್ವಿಂಟಲ್ ಶುಂಠಿ ಕಳ್ಳತನವಾಗಿದೆ.

ಕುಂಸಿಯ ದೇವೇಂದ್ರ ಎಂಬುವರು ವಿಠಗೊಂಡನಕೊಪ್ಪ ಗ್ರಾಮದಲ್ಲಿ ಜಮೀನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದರು. ನಿತ್ಯ ಜಮೀನಿಗೆ ಹೋಗಿ ಬರುತ್ತಿದ್ದರು. ಏ.29ರ ರಾತ್ರಿ ಜಮೀನಿನಲ್ಲಿದ್ದ 7 ಕ್ವಿಂಟಾಲ್ ಶುಂಠಿ ಕಳವು ಮಾಡಲಾಗಿತ್ತು. ಈ ಹಿನ್ನೆಲೆ ರಾತ್ರಿ ವೇಳೆ ಜಮೀನಿನಲ್ಲಿ ದೇವೇಂದ್ರ ಕಾವಲು ಕಾಯಲು ಆರಂಭಿಸಿದ್ದರು.
ಮೇ 4ರಂದು ಮದುವೆ ಸಮಾರಂಭಕ್ಕೆ ದೇವೇಂದ್ರ ತೆರಳಿದ್ದರು. ಆ ರಾತ್ರಿ ನಾಲ್ಕು ಚೀಲ ಶುಂಠಿ ಕಳುವಾಗಿತ್ತು. ಬೆಳೆಗಾರ ಇಲ್ಲದಿರುವುದನ್ನು ಗಮನಿಸಿ 92 ಸಾವಿರ ರೂ. ಮೌಲ್ಯದ ಶುಂಠಿ ಕಳ್ಳತನ ಮಾಡಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.