ಜಿಲ್ಲೆ

ಮನೆಗಳ್ಳನೊಬ್ಬನ ಬಂಧನ

ಮರಿದೇವ ಹೂಗಾರ

ಹುಬ್ಬಳ್ಳಿ: ಕೇಶ್ವಾಪುರದ ಬೆಳವಣಿಕಿ ಕಾಲನಿಯಲ್ಲಿ ದಾಖಲಾಗಿದ್ದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸುವಲ್ಲಿ ಕೇಶ್ವಾಪೂರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸ್ ಇನ್​ಸ್ಪೆಕ್ಟರ್ ಯು.ಎಚ್. ಸಾತೇನಹಳ್ಳಿ ನೇತೃತ್ವದ ಅಧಿಕಾರಿಗಳ ತಂಡ ಬಂಧಿತನಿಂದ 2,52,500 ರೂ. ಮೌಲ್ಯದ 53 ಗ್ರಾಂ ಚಿನ್ನ, 60 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದೆ.