ಜಿಲ್ಲೆ

ತರವಾಡುಮನೆ, ಕ್ಷೇತ್ರಕ್ಕೆ ನುಗ್ಗಿದ ಕಳ್ಳರು

Avinash R

ಕಾಸರಗೋಡು: ಕುಂಬಳೆ ಪೇಟೆಯಲ್ಲಿರುವ ಶಬರ ಶಂಕರ ಸೇವಾ ಸಮಿತಿಯ ಕುನ್ನಿಲ್‌ಪಾರೆಯಲ್ಲಿರುವ ತರವಾಡು ಕ್ಷೇತ್ರ ಮತ್ತು ತರವಾಡು ಮನೆ ಬೀಗ ಒಡೆದು ನಗದು, ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಕಳವುಗೈಯಲಾಗಿದೆ.

ದೈವಗಳ ಚಿನ್ನ, ಬೆಳ್ಳಿಯ ಆಯುಧ, ಹುಂಡಿ ಹಣ ಕಳವು

ತರವಾಡು ಮನೆಯೊಳಗಿದ್ದ ಚಿನ್ನದ ಹೂವು, ಸಣ್ಣ ಕತ್ತಿ, ತರವಾಡು ಕ್ಷೇತ್ರದಿಂದ ಶ್ರೀ ವಯನಾಟ್ ಕುಲವನ್ ದೈವದ ಬೆಳ್ಳಿ ಆಯುಧ, ಶ್ರೀ ವಿಷ್ಣುಮೂರ್ತಿ ದೈವದ ಬೆಳ್ಳಿಯ ಎರಡು ಆಯುಧ, ತೊಂಡಚ್ಚನ್ ದೈವದ ಆಯುಧ, ಹಿತ್ತಾಳೆಯ ಮೂರು ಪಾತ್ರೆಗಳು, ಚೆಂಬು, ಕಾಣಿಕೆ ಹುಂಡಿ, ಶ್ರೀ ವೆಂಕಟರಮಣ ದೇವರ ಮುಡಿಪು ಕಳವಿಗೀಡಾದ ವಸ್ತುಗಳಲ್ಲಿ ಒಳಗೊಂಡಿದೆ.

ಕಾಣಿಕೆ ಹುಂಡಿಯಲ್ಲಿ ಸುಮಾರು 1 ಸಾವಿರ ರೂ. ಹಾಗೂ ಮುಡಿಪು ಹುಂಡಿಯಲ್ಲಿ 15 ಸಾವಿರ ರೂ. ಇತ್ತೆನ್ನಲಾಗಿದೆ. ಸೇವಾ ಸಮಿತಿ ಪದಾಧಿಕಾರಿಗಳ ದೂರಿನ ಮೇರೆಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.